ತುಳುನಾಡಿನ ಸೃಷ್ಟಿಕರ್ತ ಮಹರ್ಷಿ ಪರಶುರಾಮರ ಥೀಂ ಪಾರ್ಕ್ : ಇದು ತುಳುನಾಡ ಹೆಮ್ಮೆ – ಕಹಳೆ ನ್ಯೂಸ್
ಕಾರ್ಕಳದ ಉಮ್ಮಿಕ್ಕಳ ಬೆಟ್ಟದ ತಪ್ಪಲಿನಲ್ಲಿ ನಿಂತು ತಲೆ ಎತ್ತಿ ನೋಡಿದಾಗ ಈಗ ಮೂಡುವುದು ಕೇವಲ ಸಂತಸ ಮಾತ್ರವಲ್ಲ, ಅದೊಂದು ಅವರ್ಣನೀಯ ಅನುಭೂತಿ. ನಿಸರ್ಗ ರಮಣೀಯ ಬೆಟ್ಟಕ್ಕೊಂದು ಈಗ ವಿಶೇಷ ಪಾವಿತ್ರ್ಯ ಬಂದಿದೆ. ಅಲ್ಲಿ ಈಗ ತುಳುನಾಡಿನ ಸೃಷ್ಟಿಕರ್ತ ಪರಶುರಾಮ ನೆಲೆಯಾಗಲಿದ್ದಾರೆ. ಪರಶುರಾಮ ತುಳುನಾಡನ್ನೂ ಒಳಗೊಂಡ ಕರ್ನಾ ಟಕದ ಕರಾವಳಿ ತೀರದ ಸೃಷ್ಟಿಕರ್ತ. ದಂಡಕಾರಣ್ಯದ ಪಶ್ಚಿಮಕ್ಕೆ ಇರುವ ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಾಮರು ಸೃಷ್ಟಿಸಿದ್ದು ಎಂಬುದು ಪುರಾಣ ಪ್ರತೀತಿ. ಸುಮಾರು...