Friday, January 24, 2025

ಉಡುಪಿ

ಉಡುಪಿ

ಸೆಂಟ್ರಲ್ ಕೋಸ್ಟಲ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್’ ಆಡಳಿತ ಸಮಿತಿ ಸದಸ್ಯರಾಗಿ ಶಿವಕುಮಾರ್ ಅಂಬಲಪಾಡಿ ನಾಮ ನಿರ್ದೇಶನ – ಕಹಳೆ ನ್ಯೂಸ್

ಉಡುಪಿ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಶಿಫಾರಸು ಮೇರೆಗೆ‌‌ ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಇವರನ್ನು ಕೇಂದ್ರ ಸರಕಾರದ ಸ್ವಾಮ್ಯದ "ಸೆಂಟ್ರಲ್ ಕೋಸ್ಟಲ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್‌‌" ಗೋವಾ ಇದರ‌ 'ಇನ್ಸ್ಟಿಟ್ಯೂಟ್ ಮೆನೇಜ್ಮೆಂಟ್ ಕಮಿಟಿ' ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ 'ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್' ನವದೆಹಲಿ‌‌ ಆದೇಶ ಹೊರಡಿಸಿದೆ ಇವರು ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ತಲಾ ಎರಡು ಅವಧಿಗೆ ಗ್ರಾಮ...
ಉಡುಪಿ

ಉಡುಪಿ: ವಕೀಲೆಯ ಮನೆಗೆ ನುಗ್ಗಿ ನಗ ನಗದು ದೋಚಿದ್ದ ಆರೋಪಿ ಸೆರೆ– ಕಹಳೆ ನ್ಯೂಸ್

ಉಡುಪಿ : ನಗರದ ಹೃದಯ ಭಾಗದ ಕೋರ್ಟ್ ರಸ್ತೆ ಸಮೀಪದ ವಕೀಲೆಯ ಮನೆಗೆ ನುಗ್ಗಿ ನಗ ನಗದು ದೋಚಿದ್ದ ಆರೋಪಿಯನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುತ್ತಣ್ಣ ಬಸಣ್ಣ ಮಾವರಾಣಿ (27) ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.ಹಾಡು ಹಗಲೇ‌ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ನಗದು, ಚಿನ್ನಾಭರಣ, ಬೆಲೆಬಾಳುವ ಸೀರೆ ಸೇರಿದಂತೆ ಒಟ್ಟು ಇಪ್ಪತೈದು ಲಕ್ಷದ ಮೌಲ್ಯದ ವಸ್ತುಗಳನ್ನು‌ ಕಳವು ಮಾಡಿದ್ದ. ಆರೋಪಿಯಿಂದ ಸುಮಾರು ಹತ್ತು ಲಕ್ಷ ಮೌಲ್ಯದ...
ಉಡುಪಿ

ಉಡುಪಿ : ಸಂತೆಕಟ್ಟೆಯ ಮಮತೆಯ ತೊಟ್ಟಿಲು ಕೃಷ್ಣಾನುಗ್ರಹಕ್ಕೆ ಭೇಟಿ ನೀಡಿ ಸಹಾಯಧನದ ಚೆಕ್ ಹಸ್ತಾಂತರಿಸಿದ ಬ್ರಹ್ಮಗಿರಿ ಲಯನ್ಸ್ ಕ್ಲಬ್ ನ ಸದಸ್ಯರು – ಕಹಳೆ ನ್ಯೂಸ್

ಉಡುಪಿ : ಸಂತೆಕಟ್ಟೆಯ ಮಮತೆಯ ತೊಟ್ಟಿಲು ಕೃಷ್ಣಾನುಗ್ರಹಕ್ಕೆ ಭೇಟಿ ನೀಡಿ ಸಹಾಯಧನದ ಚೆಕ್ ಹಸ್ತಾಂತರಿಸಿದ ಬ್ರಹ್ಮಗಿರಿ ಲಯನ್ಸ್ ಕ್ಲಬ್ ನ ಸದಸ್ಯರು – ಕಹಳೆ ನ್ಯೂಸ್ ಉಡುಪಿ : ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಲಯನ್ಸ್ ಮತ್ತು ಲಿಯೋ ಸದಸ್ಯರು ಸಂತೆಕಟ್ಟೆಯ ಮಮತೆಯ ತೊಟ್ಟಿಲು ಕೃಷ್ಣಾನುಗ್ರಹಕ್ಕೆ ಭೇಟಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಕೃಷ್ಣಾನುಗ್ರಹದ ಮಕ್ಕಳ ದಿನನಿತ್ಯದ ಉಪಯೋಗಕ್ಕಾಗಿ ದಿನಸು ಹಾಗೂ ಧನಸಹಾಯದ ರೂಪದಲ್ಲಿ ಕ್ಲಬ್ಬಿನ ವತಿಯಿಂದ ಚೆಕ್ಕನ್ನು ಹಸ್ತಾಂತರಿಸಲಾಯಿತು.ಈ ಸಮಯದಲ್ಲಿ ಲಿಯೋ ಅಧ್ಯಕ್ಷರಾದ...
ಉಡುಪಿದಕ್ಷಿಣ ಕನ್ನಡ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿಯಲ್ಲಿ ಬೆಲೆ ಕುಸಿತ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 10 ದಿನಗಳ ಹಿಂದೆ ಗಗನಕ್ಕೇರಿದ್ದ ಕೋಳಿ ಮಾಂಸ ಹಾಗೂ ಮೊಟ್ಟೆ ದರ ಭಾರಿ ಇಳಿಕೆ ಕಂಡಿದ್ದು, ಮಾಂಸ ಪ್ರಿಯರು ಖುಷಿ ಪಡುವಂತಾಗಿದೆ. 10 ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಕೋಳಿ ಮಾಂಸ ಸ್ಕಿನ್ ಲೆಸ್ ಕೆಜಿಗೆ 240 ರೂ. ಇತ್ತು. ವಿತ್ ಸ್ಕಿನ್ ಕೆ.ಜಿ.ಗೆ 220 ರೂ. ಹಾಗೂ ಜೀವಂತ ಕೋಳಿ 180 ರೂ. ವರೆಗೆ ಇತ್ತು. ಜು. 24ರಂದು...
ಉಡುಪಿ

ಮಣಿಪಾಲದ ನವೀನ್ ಕೊಲೆಯ ಪ್ರಕರಣ: ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ- ಕಹಳೆ ನ್ಯೂಸ್

ಮಣಿಪಾಲದ ನವೀನ್ ಕೊಲೆಯ ಪ್ರಕರಣ: ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ- ಕಹಳೆ ನ್ಯೂಸ್ ಉಡುಪಿ : ಜು.21 ರಂದು ಸಂಜೆ ಮಣಿಪಾಲ ಠಾಣಾ ವ್ಯಾಪ್ತಿಯ ಇಂದ್ರಾಳಿ ರೈಲ್ವೇ ನಿಲ್ದಾಣದ ಸಮೀಪ ನಡೆದ ನವೀನ್ ಕೊಲೆಯ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇಂದ್ರಾಳಿಯ ಬಾರ್ ನಲ್ಲಿ ಸ್ನೇಹಿತನಾದ ಕುಮಾರ್ ನನ್ನು ತಮಿಳುನಾಡು ಮೂಲದ ನವೀನ್ ಮತ್ತು ವಿಘ್ನೇಶ್ ಅಲಿಯಾಸ್ ಕುಟ್ಟಿ ಕ್ಷುಲಕ ಕಾರಣಕ್ಕೆ ಮರದ...
ಉಡುಪಿಸುದ್ದಿ

ಉಡುಪಿ: ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶೇರಿಗಾರ ಅಶೋಕ ಸಪಳಿಗ ನಿಧನ –ಕಹಳೆ ನ್ಯೂಸ್

ಉಡುಪಿ: ಉಡುಪಿ ಜಿಲ್ಲೆಯ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶೇರಿಗಾರ ಅಶೋಕ ಸಪಳಿಗ ಮುಂಡ್ಕೂರು (52) ಅವರು ಅಸೌಖ್ಯದಿಂದ ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಸಪಳಿಗ ಸಮುದಾಯದ ಯುವ ಗುರಿಕಾರರಾಗಿ, ಸರಳ ಸಜ್ಜನಿಕೆಯಿಂದಲೇ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಮತ್ತು ಪುತ್ರಿ ಹಾಗೂ ಸಹೋದರರು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ಗಂಟೆಗೆ ಮುಂಡ್ಕೂರು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ....
ಉಡುಪಿಸುದ್ದಿ

ಉಡುಪಿ: ಆಗಸ್ಟ್ 13 ರಿಂದ 15 ರ ವರೆಗೆ ಜಿಲ್ಲೆಯಲ್ಲಿ ಪ್ರತೀ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನ :  ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ – ಕಹಳೆ ನ್ಯೂಸ್

ಉಡುಪಿ: ರಾಷ್ಟ್ರದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸಾರ್ವಜನಿಕರಲ್ಲಿ ರಾಷ್ಟ್ರಪ್ರೇಮ ಮತ್ತು ದೇಶಭಕ್ತಿಯ ಗೌರವವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಪ್ರತೀ ಮನೆಯಲ್ಲೂ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ) ಅಭಿಯಾನವನ್ನು ಜಿಲ್ಲೆಯಲ್ಲಿ ಆಗಸ್ಟ್ 13 ರಿಂದ 15 ರ ವರೆಗೆ ಆಯೋಜಿಸಲು ಅಗತ್ಯವಿರುವ ಸಿದ್ದತೆಗಳನ್ನು ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ನಿರ್ದೇಶನ ನೀಡಿದರು. ಅವರು ಶುಕ್ರವಾರ, ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಜಿಲ್ಲೆಯಲ್ಲಿ...
ಉಡುಪಿಕ್ರೈಮ್ರಾಜ್ಯಸುದ್ದಿ

ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಕೊಲೆ ; ಕುಡಿದ ಅಮಲಿನಲ್ಲಿ ತಾಯಿಯನ್ನು ನಿಂದಿಸಿದಾತನನ್ನು ಕೊಲೆ ಮಾಡಿದ ವ್ಯಕ್ತಿ – ಕಹಳೆ ನ್ಯೂಸ್

ಉಡುಪಿ, ಜು 20 : ಕುಡಿದ ಅಮಲಿನಲ್ಲಿ ತಾಯಿಗೆ ನಿಂದಿಸಿದ ಎಂದು ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಮಣಿಪಾಲದ ರಾ. ಹೆದ್ದಾರಿ 169A ನಿಂದ ಇಂದ್ರಾಳಿ ರೈಲ್ವೆ ನಿಲ್ದಾಣದ ಕಡೆಗೆ ಹೋಗುವ ರಸ್ತೆಯಲ್ಲಿ ಗುರುವಾರ ಸಂಜೆ ನಡೆದಿದೆ. ತಮಿಳುನಾಡು ಮೂಲದ ಕುಮಾರ್(32) ಕೊಲೆಯಾದ ವ್ಯಕ್ತಿ.   ಕುಟ್ಟಿ ಮತ್ತು ನವೀನ್ ಎಂಬುವವರು ಇಂದ್ರಾಳಿ ಗುರು ಬಾರ್ ನಿಂದ ಮದ್ಯಪಾನ ಮಾಡಿ ನಡೆದುಕೊಂಡು ಬರುವಾಗ ಕುಮಾರ್ (32) ಎಂಬುವವನು ಕುಡಿದ ಅಮಲಿನಲ್ಲಿ ನವೀನ್...
1 63 64 65 66 67 85
Page 65 of 85