Friday, January 24, 2025

ಉಡುಪಿ

ಉಡುಪಿಕ್ರೈಮ್ರಾಜ್ಯಸುದ್ದಿ

ಮಂಗಳೂರಿನಿಂದ ಉಡುಪಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಬಾಣಸಿಗ – ಕಹಳೆ ನ್ಯೂಸ್

ಉಡುಪಿ: ಮಂಗಳೂರು ಮೂಲದ ವ್ಯಕ್ತಿಯೊರ್ವ ಉಡುಪಿಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದು, ಸಮಾಜಸೇವಕರ ಸಮಯಪ್ರಜ್ಞೆಯಿಂದ ಬದುಕಿಸಿರುವ ಘಟನೆ ಬುಧವಾರ ನಡೆದಿದೆ. ಹೋಟೆಲಿನಲ್ಲಿ ಬಾಣಸಿಗರಾಗಿದ್ದ ಮಂಗಳೂರು ಮೂಲದ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಉಡುಪಿಯ ಖಾಸಗಿ ವಸತಿಗೃಹಗಳಲ್ಲಿ ಸ್ಥಳಾವಕಾಶ ಹುಡುಕುತ್ತಿದ್ದರು. ಈ ಬಗ್ಗೆ ವಿಷಯ ತಿಳಿದ ಉಡುಪಿಯ ಸಮಾಜಸೇವಕರು ವ್ಯಕ್ತಿಯನ್ನು ರಕ್ಷಿಸಿ, ಮನವೊಲಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಮಾಜಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ನಿತ್ಯಾನಂದ ಒಳಕಾಡು, ದೀಪಕ್, ಹರೀಶ್ ಅಮೀನ್ ಭಾಗಿಯಾಗಿದ್ದರು....
ಉಡುಪಿದಕ್ಷಿಣ ಕನ್ನಡರಾಜ್ಯಸುದ್ದಿ

ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ..! 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ರಾಜ್ಯಾದ್ಯಂತ ಮಳೆಯಾಗುವ ಹಿನ್ನೆಲೆ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಫೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಜೂನ್ 25 ರವರೆಗೆ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆಯಿದೆ. ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ...
ಉಡುಪಿಸುದ್ದಿ

ತಲವಾರಿನಲ್ಲಿ ಕೇಕ್ ಕತ್ತರಿಸಿ ಬರ್ತಡೆ ಆಚರಣೆ; ಬರ್ತಡೇ ಬಾಯ್ ಸೇರಿ ಮೂವರು ವಶಕ್ಕೆ – ಕಹಳೆ ನ್ಯೂಸ್

ಉಡುಪಿ: ತಲವಾರಿನಲ್ಲಿ ಕೇಕ್ ತುಂಡರಿಸಿ ಬರ್ತ್ಡೇ ಆಚರಿಸಿದ ಏಳು ಮಂದಿಯ ವಿರುದ್ಧ ಉಡುಪಿಯ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಶರತ್ ಶೆಟ್ಟಿ ಎಂಬರನ್ನು ವಶಕ್ಕೆ ಪಡೆಯಲಾಗಿದ್ದು , ಉಳಿದಂತೆ ತಲೆ ಮರೆಸಿಕೊಂಡಿರುವ ಬರ್ತ್ ಡೇ ಯುವಕ ನಿರಂಜನ್ ಶೆಟ್ಟಿಗಾರ್, ತನುಜ್, ಸೂರಜ್ ಹಾಗೂ ಅನಿಶ್ ಇವರುಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಳೆದ ಮೂವತ್ತನೇ ತಾರೀಕಿನಂದು ಪಡುಬಿದ್ರಿಯ ಜೀತೇಂದ್ರ ಶೆಟ್ಟಿ ಮನೆಯಲ್ಲಿ ಈ ಏಳು...
ಉಡುಪಿಸುದ್ದಿ

ವಿಶ್ವ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತುಳುನಾಡ ಕುವರಿಗೆ ಬೆಳ್ಳಿ ಪದಕ – ಕಹಳೆ ನ್ಯೂಸ್

ಖಜಕಿಸ್ತಾನ: ವಿಶ್ವ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಬೋಳ ಅಕ್ಷತಾ ಪೂಜಾರಿಯವರು ಬೆಳ್ಳಿ ಪದಕ ಪಡೆದಿದ್ದಾರೆ. ತುಳುನಾಡ ಕುವರಿ ಉಡುಪಿಯ ಬೋಳ ಅಕ್ಷತಾ ಪೂಜಾರಿಯವರು ಮೇ 23 ರಂದು ನಡೆದ ವಿಶ್ವ ಪವರ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ....
ಉಡುಪಿಸುದ್ದಿ

ಉದ್ಯೋಗ ಸಿಗದ ಹಿನ್ನೆಲೆ ಮನನೊಂದ ಆತ್ಮಹತ್ಯೆಗೆ ಶರಣಾದ ಎಂಬಿಎ ಪದವಿಧರೆ – ಕಹಳೆ ನ್ಯೂಸ್

ಉಡುಪಿ: ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಮನನೊಂದ ಎಂಬಿಎ ಪದವಿಧರೆ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯ ಕಾಪುವಿನಲ್ಲಿ ನಡೆಸಿದೆ. ಉಪ್ಪಿನಂಗಡಿಯ 23 ವರ್ಷದ ಸಹನಾ ಆತ್ಮಹತ್ಯೆಗೆ ಶರಣಾದ ಯುವತಿ. ಒಂದುವರೆ ವರ್ಷದ ಹಿಂದೆ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ಮುಗಿಸಿದ್ದ ಸಹನಾ ತನ್ನ ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರು. ಆದರೆ ಕೆಲಸ ಸಿಕ್ಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಸಹನಾ ಆತ್ಮಹತ್ಯೆಯ ದುಡುಕಿನ ನಿರ್ಧಾರ ಮಾಡಿದ್ದಾಳೆ. ಶಿರ್ವ ಸಮೀಪದ...
ಉಡುಪಿರಾಜಕೀಯಸುದ್ದಿ

ಕಾಂಗ್ರೆಸ್‍ಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗುಡ್‍ಬೈ – ಕಹಳೆ ನ್ಯೂಸ್

ಉಡುಪಿ : ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಸೇರಿ ಪ್ರಾಥಮಿಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಪ್ರಮೋದ್ ಮಧ್ವರಾಜ್, ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಜಿ ಮೀನುಗಾರಿಕಾ ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಸಚಿವರಾಗಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‍ಗೆ ರಾಜೀನಾಮೆ ಪತ್ರ ರವಾನಿಸಿದರು. ಹಲವಾರು ದಿನಗಳಲ್ಲಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆಯುವ ಸೂಚನೆ ಇತ್ತು....
ಉಡುಪಿಸುದ್ದಿ

ಎಬಿವಿಪಿ ಉಡುಪಿ ವತಿಯಿಂದ ಪಿಎಸ್‍ಐ ನೇಮಕಾತಿ ಮತ್ತು ಕರ್ನಾಟಕ ಪ್ರಾದ್ಯಾಪಕರ ನೇಮಕಾತಿಯಲ್ಲಿ ನಡೆದ ಅಕ್ರಮವನ್ನು ಖಂಡಿಸಿ, ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಏನ್ ಅವರಿಗೆ ಮನವಿ – ಕಹಳೆ ನ್ಯೂಸ್

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಪಿಎಸ್‍ಐ ನೇಮಕಾತಿ ಮತ್ತು ಕರ್ನಾಟಕ ಪ್ರಾದ್ಯಾಪಕರ ನೇಮಕಾತಿಯಲ್ಲಿ ನಡೆದ ಅಕ್ರಮ ವನ್ನು ಖಂಡಿಸಿ ಅಕ್ರಮ ಚಟುವಟಿಕೆ ಹಾಗು ಭ್ರಷ್ಟಾಚಾರದ ವಿರುದ್ಧ ಅತ್ಯಂತ ಕಠಿಣ ಕ್ರಮ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಯದ ವೀಣಾ ಬಿ.ಏನ್ ಇವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಆಶಿಶ್ ಶೆಟ್ಟಿ, ತಾಲೂಕು ಸಂಚಾಲಕ ಸುಮುಖ...
ಉಡುಪಿಸುದ್ದಿ

ಬ್ರಹ್ಮಾವರ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ – ಕಹಳೆ ನ್ಯೂಸ್

ಬ್ರಹ್ಮಾವರ: ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟುತ್ತೇನೆಂದು ನಂಬಿದ್ದ ಯುವಕನ ಮದುವೆ ಮುರಿದು ಬಿದ್ದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಮೂಲತಃ ಬ್ರಹ್ಮಾವರದವರಾಗಿದ್ದು, ವರ ವಿದೇಶದಲ್ಲಿ, ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದರೆ ಅವರಿಬ್ಬರು ಕೆಲವೇ ಕ್ಷಣಗಳಲ್ಲಿ ಸತಿಪತಿಗಳಾಗುತ್ತಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ತಾಳಿ ಕಟ್ಟುವ ವೇಳೆ ವಧು ತನಗೆ ಈ ಮದುವೆ ಇಷ್ಟವಿಲ್ಲ ಎಂದ ಕಾರಣ ಮದುವೆಯೊಂದು ಮುರಿದು ಬಿದ್ದು ಎಲ್ಲರಿದೂ ಅಘಾತವಾಗಿದೆ. ಈ ಯುವಕ ಮತ್ತು...
1 66 67 68 69 70 85
Page 68 of 85