ಕಾಪು ಮಲ್ಲಾರು ಸಲಫಿ ಮಸೀದಿ ಸಮೀಪದ ಗುಜರಿ ಅಂಗಡಿಗೆ ಬೆಂಕಿ ; ಸಿಲಿಂಡರ್ ಸ್ಫೋಟಕ್ಕೆ ರಜಾಕ್ ಮಲ್ಲಾರ್ ಹಾಗೂ ಪಾಲುದಾರ ರಜಬ್ ಸಜೀವ ದಹನ, ಮೂವರು ಗಂಭೀರ – ಕಹಳೆ ನ್ಯೂಸ್
ಕಾಪು, ಮಾ 21 : ಕಾಪು ಸಮೀಪದ ಫಕೀರ್ನಕಟ್ಟೆಯಲ್ಲಿದ್ದ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡ ದಾರುಣ ಘಟನೆ ಮಾ ೨೧ರ ಬೆಳಗ್ಗೆ ನಡೆದಿದೆ. ರಜಾಕ್ ಮಲ್ಲಾರ್ ಹಾಗೂ ಅಂಗಡಿಯ ಪಾಲುದಾರರಾದ ಚಂದ್ರನಗರದ ರಜಬ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನೋರ್ವ ಪಾಲುದಾರ ಹಸನಬ್ಬ ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗಡಿಯಲ್ಲಿ ಗುಜರಿಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ...