ಉಡುಪಿಯ ಬಸ್ ನಿಲ್ದಾಣದ ಸಂಕೀರ್ಣದಲ್ಲಿರುವ ಯಾತ್ರಿ ನಿವಾಸ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ; ಪೋಲಿಸ್ ದಾಳಿ – 4 ಪುರುಷರ ಬಂಧನ, ಇಬ್ಬರು ಮಹಿಳೆಯರ ರಕ್ಷಣೆ – ಕಹಳೆ ನ್ಯೂಸ್
ಉಡುಪಿ, ಜ 28 : ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ನಾಲ್ವರು ಪುರುಷರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ. ಬಂಧಿತರನ್ನು ಲಾಡ್ಜ್ ಕ್ಯಾಶಿಯರ್ ಗುರುರಾಜ್ (30), ವಿಜಯ್ ಶೆಟ್ಟಿ (26) ಮತ್ತು ಗ್ರಾಹಕರಾಗಿ ಬಂದಿದ್ದ ಹೇಮಂತ್ ಕುಮಾರ್ (24), ಸಂದೀಪ್ (31) ಎಂದು ಗುರುತಿಸಲಾಗಿದೆ. ಉಡುಪಿಯ ಹೃದಯಭಾಗದಲ್ಲಿರುವ ಸರ್ವಿಸ್ ಬಸ್ ನಿಲ್ದಾಣದ ಸಂಕೀರ್ಣದಲ್ಲಿರುವ ಯಾತ್ರಿ ನಿವಾಸದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದಾಗಿ ಮಾಹಿತಿ ತಿಳಿದ ತಕ್ಷಣ...