ಮೆಹೆಂದಿ ಮನೆಯಲ್ಲಿ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಟ್ವಿಸ್ಟ್, ಪೊಲೀಸರಿಂದ ದಾಖಲಾಯಿತು ದೂರು…!- ಕಹಳೆ ನ್ಯೂಸ್
ಕೋಟ: ಡಿಜೆ ಸೌಂಡ್ ವಿಚಾರವಾಗಿ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಕೊರಗ ಸಮುದಾಯದ ಮೇಲೆ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಕೊರಗ ಸಮುದಾಯದ 7 ಮಂದಿಯ ಮೇಲೆ ದೂರು ದಾಖಲಿಸಿದ ಪೊಲೀಸರು, ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಈ ಬಗ್ಗೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಕಾನ್‍ಸ್ಟೆಬಲ್ ಜಯರಾಮ್ ಅವರು ಪ್ರತಿದೂರು ನೀಡಿದ್ದು, ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಅವರ ಮನೆಯಲ್ಲಿ ಏರುಧ್ವನಿಯಲ್ಲಿ ಡಿಜೆ ಹಾಕಿರುವ ಕುರಿತು ಸ್ಥಳೀಯರಿಂದ ದೂರು ಬಂದಿತ್ತು....