ಪೆರ್ಡೂರು ಮೇಳದಿಂದ ಜನ್ಸಾಲೆ ರಾಘವೇಂದ್ರ ಆಚಾರ್ಯ ಔಟ್ ; ಸುಬ್ರಹ್ಮಣ್ಯ ಧಾರೇಶ್ವರ ಇನ್..! ಗಾನವೈಭವ, ನಾಟ್ಯ ವೈಭವ – ಮೇಳಕ್ಕೆ ಗೈರು…! ಯಜಮಾನರು ಕಂಗಾಲು..! ಅಭಿಮಾನಿಗಳಿಗೆ ನಿರಾಸೆ..! – ಕಹಳೆ ನ್ಯೂಸ್
ಕುಂದಾಪುರ: ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ 9 ವರ್ಷದ ಬಳಿಕ ಮತ್ತೆ ಈ ತಿರುಗಾಟದಿಂದ ರಂಗಮಂಚವೇರಲಿದ್ದಾರೆ. ಈವರೆಗೆ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ದಿಢೀರ್ ನಿರ್ಗಮಿಸಿದ್ದಾರೆ. ನ. 30ರಿಂದ ಮೇಳ ತಿರುಗಾಟ ಆರಂಭಿಸಲಿದ್ದು ಪ್ರೊ| ಪವನ್ ಕಿರಣ್‌ಕೆರೆ ಅವರ “ಕೃಷ್ಣಕಾದಂಬಿನಿ’ ಪ್ರಸಂಗ ಈ ವರ್ಷದ ಕಥಾನಕವಾಗಿ ಪ್ರದರ್ಶನವಾಗಲಿದೆ. ಕೆಲವು ತಿಂಗಳ ಹಿಂದೆ ಇಂತಹ ಸುದ್ದಿ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ಜನ್ಸಾಲೆಯವರೇ ಸ್ಪಷ್ಟನೆ ನೀಡಿದ್ದರು. ಆ...