ಉಡುಪಿಯಲ್ಲಿ ಕಾಡಹಂದಿ ಹಿಡಿಯಲು ಇಟ್ಟಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು-ಕಹಳೆ ನ್ಯೂಸ್
ಉಡುಪಿ : ಹಂದಿ ಹಿಡಿಯಲು ಇಟ್ಟಿದ್ದ ಉರುಳಿಗೆ ಚಿರತೆಯೊಂದು ಬಿದ್ದು ಸಾವನಪ್ಪಿರುವ ಘಟನೆ ಉಡುಪಿಯ ಹಿರೇಬೆಟ್ಟು ಗ್ರಾಮದ ಕಂಚಿನಬೈಲು ಎಂಬಲ್ಲಿ ನಡೆದಿದೆ. ಸರಕಾರಿ ಜಾಗದಲ್ಲಿ ಹಂದಿ ಹಿಡಿಯಲು ತಂತಿ ಉರುಳನ್ನು ಮರಕ್ಕೆ ಕಟ್ಟಲಾಗಿತ್ತು, ಆ ದಾರಿಯಲ್ಲಿ ಬಂದ ಚಿರತೆ ಉರುಳು ಕಾಣದೆ, ಮೇಲಿನಿಂದ ತಗ್ಗಿಗೆ ಇಳಿಯುವಾಗ ಉರುಳಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಉರಳು ಸೊಂಟಕ್ಕೆ ಬಿಗಿದು, ಚಿರತೆ ತಗ್ಗಿನಲ್ಲಿ ನೇತಾಡುತ್ತಾ, ನೆಲ ಮುಟ್ಟುವುದಕ್ಕೆ ಶತಪ್ರಯತ್ನ ಮಾಡಿ, ಸಾಧ್ಯವಾಗದೇ ಒದ್ದಾಡುತ್ತಾ ಅಲ್ಲಿಯೇ ಪ್ರಾಣ...