Thursday, January 23, 2025

ಉಡುಪಿ

ಉಡುಪಿ

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು 1,000 ಕೋಟಿಗಿಂತ ಅಧಿಕ ಹಣ ಸಂಗ್ರಹ ; ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು-ಕಹಳೆ ನ್ಯೂಸ್

ಉಡುಪಿ : ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಸಂಗ್ರಹಿಸಿದ ಮೊತ್ತವು 1,000 ಕೋಟಿ ರೂ.ಗಳನ್ನು ಮೀರಿದೆ ಎಂದು ನಿನ್ನೆ ಹೇಳಿದರು. ಹಾಗೂ ಅವರು, ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಹಿಂದೂ ಸಮಾಜದ ಐಕ್ಯತೆಯ ದೃಷ್ಟಿಯಿಂದ ಎಲ್ಲಾ ವರ್ಗದ ಜನರ ದೇಣಿಗೆ ಒಂದು ಪ್ರಮುಖ ಬೆಳವಣಿಗೆಯಾಗಿದೆ ಎಂದು ಮಾಧ್ಯಮದೊಂದಿಗೆ ಮಾತನಾಡಿದರು. ರಾಜ್ಯದ ಎಲ್ಲಾ ದೇವಾಲಯಗಳ ಸುತ್ತಲಿನ ಭೂಮಿಯನ್ನು...
ಉಡುಪಿ

ಉಡುಪಿ ನಗರ ಮತ್ತು ಜಿಲ್ಲೆಯಲ್ಲಿ ನರ್ಮ್ ಬಸ್ ಪ್ರಾರಂಭಿಸುವಂತೆ ಕಾಂಗ್ರೆಸ್ ಒತ್ತಾಯ-ಕಹಳೆ ನ್ಯೂಸ್

ಉಡುಪಿ : ಉಡುಪಿ ನಗರ ಮತ್ತು ಜಿಲ್ಲೆಯಲ್ಲಿ ಪ್ರಮೋದ್ ಮಧ್ವರಾಜ್‍ರವರು ಸಚಿವರಾಗಿದ್ದಾಗ 51 ಮಾರ್ಗಗಳಲ್ಲಿ ನರ್ಮ್ ಬಸ್‍ಗಳನ್ನು ಸತತ ಪರಿಶ್ರಮದಿಂದ ಖಾಸಗಿ ಬಸ್ ಮಾಲಿಕರ ಲಾಬಿಗೆ ಮಣಿಯದೆ ಪ್ರಾರಂಭಿಸಿದರು. ಉದ್ದೇಶ ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು ಮತ್ತು ಹಿರಿಯ ನಾಗರಿಕರಿಗೆ ನಿತ್ಯ ಪ್ರಯಾಣಿಕರಿಗೆ ಮಿತ ದರದಲ್ಲಿ ಪ್ರಯಾಣಿಸಲು ಅನುಕೂಲವಾಗಲು ಅವಶ್ಯಕತೆ ಇದ್ದ ಮಾರ್ಗಗಳಲ್ಲಿ ಸರಕಾರಿ ಬಸ್‍ಗಳನ್ನು ಪ್ರಾರಂಭಿಸಿದರು. ಕಳೆದ ವರ್ಷ ಕೋವಿಡ್ -19 ನೆಪದಿಂದ ತನ್ನ ಸಂಚಾರವನ್ನು ಕೆಲವು ತಿಂಗಳು ಸಂಪೂರ್ಣ...
ಉಡುಪಿ

ಮದುವೆಯಾಗುವುದಾಗಿ ನಂಬಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ; ಆರೋಪಿಯ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು-ಕಹಳೆ ನ್ಯೂಸ್

ಉಡುಪಿ : ಮದುವೆಯಾಗುವುದಾಗಿ ನಂಬಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಗೆ 17 ವರ್ಷ 9ತಿಂಗಳು ವಯಸ್ಸಾಗಿದ್ದು, ಈ ಕಾರಣದಿಂದ 27 ವರ್ಷ ವಯಸ್ಸಿನ ಆರೋಪಿಯ ವಿರುದ್ಧ ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದ್ದು, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಉಡುಪಿಯ ಮಕ್ಕಳ ಸಹಾಯವಾಣಿಗೆ ಬಂದ ದೂರಿನನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ...
ಉಡುಪಿ

ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತಾಡಿ ಭಾಗದಲ್ಲಿ ಗೋರಿಲ್ಲಾ ಪ್ರತ್ಯಕ್ಷ-ಕಹಳೆ ನ್ಯೂಸ್

ಉಡುಪಿ: ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತಾಡಿ ಭಾಗದಲ್ಲಿ ಗೋರಿಲ್ಲಾ ಕಾಣಿಸಿಕೊಂಡಿದೆ. ಈಗಾಗಲೇ ಸಾಮಾನ್ಯವಾಗಿ ಎಲ್ಲಾ ಕಡೆ ಚಿರತೆ, ಕಾಡುಕೋಣ ಗೋಚರಿಸುತ್ತಿತ್ತು. ಆದರೆ ಇದೀಗ ಗೋರಿಲ್ಲಾ ಕಾಣಿಸಿಕೊಂಡಿದೆ. ಈ ಗೋರಿಲ್ಲಾ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಅರಣ್ಯ ಇಲಾಖೆ ಅಧಿಕಾರಿ ಹರೀಶ್ ನೇತೃತ್ವದಲ್ಲಿ ಶೋಧ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೋರಿಲ್ಲಾ ಹೆಜ್ಜೆ ಗುರುತು ಕಾಣಿಸಿದ್ದು, ಸುಮಾರು ಎಂಟು ಎಕರೆ ವಿಸ್ತೀರ್ಣದ...
ಉಡುಪಿ

ಉಡುಪಿಯ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಹೊಸ ವರ್ಷದ ಸಂದೇಶ ಬರೆಯುವಾಗ ಭೀಕರ ಅಪಘಾತ; ಇಬ್ಬರು ಯುವಕರ ಸಾವು-ಕಹಳೆ ನ್ಯೂಸ್

ಉಡುಪಿ :ಉಡುಪಿಯ ಕಾರ್ಕಳದ ಮೀಯಾರು ಕಾಜರ ಬೈಲಿ ಎಂಬಲ್ಲಿ ಇಬ್ಬರು ಯುವಕರು ಹ್ಯಾಪಿ ನ್ಯೂ ಇಯರ್ ಎಂದು ರಸ್ತೆಯಲ್ಲಿ ಹೊಸ ವರ್ಷದ ಸಂದೇಶ ಬರೆಯುವಾಗ ವೇಗವಾಗಿ ಬಂದ ಈಕೋ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಉಡುಪಿ

ಉಡುಪಿಗೆ ಬ್ರಿಟನ್ ವೈರಸ್ ಭೀತಿ ಇಲ್ಲ; ಎಂಟು ಮಂದಿಯ ರಿಪೋರ್ಟ್ ನೆಗೆಟಿವ್- ಕಹಳೆ ನ್ಯೂಸ್

ಉಡುಪಿ:ಉಡುಪಿ ಜಿಲ್ಲೆಗೆ ಬ್ರಿಟನ್ ನಿಂದ ಎಂಟು ಮಂದಿ ಆಗಮಿಸಿದ್ದರಿಂದ ಉಡುಪಿಗೆ ಬ್ರಿಟನ್ ವೈರಸ್ ಭೀತಿ ಕಾಡಿತ್ತು. ಆದರೆ ಇದೀಗ ಆ ಎಂಟು ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇದರಿಂದ ಉಡುಪಿ ಜಿಲ್ಲೆಯ ಜನತೆಯ ಆತಂಕ ದೂರಾಗಿದೆ. ಇಂಗ್ಲೆಂಡ್ ನಿಂದ ಡಿಸೆಂಬರ್ 21 ರಂದು ಎಂಟು ಮಂದಿ ಜಿಲ್ಲೆಗೆ ಬಂದಿದ್ದರು. ಉಡುಪಿ ತಾಲೂಕಿನ ಮೂವರು, ಕಾರ್ಕಳ ತಾಲೂಕಿನ ನಾಲ್ವರು ಹಾಗೂ ಕುಂದಾಪುರ ತಾಲೂಕಿನ ಒಬ್ಬರು ಸೇರಿ ಒಟ್ಟು 8 ಮಂದಿ...
ಉಡುಪಿ

50 ಲಕ್ಷ ರೂ. ಗೆದ್ದ ಉಡುಪಿ ವಿದ್ಯಾರ್ಥಿ – ಕಹಳೆ ನ್ಯೂಸ್

ಉಡುಪಿ: ಅಮಿತಾಭ್ ಬಚ್ಚನ್ ನಡೆಸಿಗೊಡುವ 'ಕೌನ್ ಬನೇಗಾ ಕರೋಡ್​ಪತಿ- ಸ್ಟೂಡೆಂಟ್ ವೀಕ್ ಸ್ಪೆಷಲ್'ನ ಗೇಮ್ ಶೋದಲ್ಲಿ ನಗರದ ವಿದ್ಯೋದಯ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅನಮಯ ಯೋಗೇಶ್ ದಿವಾಕರ್ 50 ಲಕ್ಷ ರೂ. ಬಹುಮಾನ ಗೆದ್ದಿದ್ದಾನೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವೇದಾಂತು ಆನ್​ಲೈನ್ ಲರ್ನಿಂಗ್ ಆಪ್​ನಲ್ಲಿ ಅ.5ರಿಂದ 25ರವರೆಗೆ ಆನ್​ಲೈನ್ ಕ್ವಿಜ್ ಆಯೋಜಿಸಲಾಗಿತ್ತು. ದೇಶದಾದ್ಯಂತ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾವಿರ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಆಯ್ಕೆಯಾಗಿದ್ದು, ಇದರಲ್ಲಿ...
ಉಡುಪಿ

ಉಡುಪಿ ಜಿಲ್ಲೆಯ ‘ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ’ ನಿಧನ-ಕಹಳೆ ನ್ಯೂಸ್

ಉಡುಪಿ :ಉಡುಪಿ ಜಿಲ್ಲೆಯ ಡಾ.ಬನ್ನಂಜೆ ಗೋವಿಂದಾಚಾರ್ಯ(84) ಇಂದು ತಮ್ಮ ಸ್ವಗೃಹ ಅಂಬಲಪಾಡಿಯಲ್ಲಿ ಬೆಳಗ್ಗೆ 11 ಗಂಟೆಗೆ ನಿಧನರಾಗಿದ್ದಾರೆ. ದೇಶದ ಪ್ರಮುಖ ವಿದ್ವಾಂಸರದಲ್ಲಿ ಒಬ್ಬರೆನಿಸಿಕೊಂಡಿದ್ದಂತ ಬನ್ನಂಜೆ ಗೋವಿಂದಾಚಾರ್ಯರು ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ 1936ರಲ್ಲಿ ಜನಿಸಿದ್ದರು. ಇವರು ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದರು.ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಗೋವಿಂದಾಚಾರ್ಯರು ಅನೇಕ ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ 'ಆನ೦ದಮಾಲಾ', ತ್ರಿವಿಕ್ರಮ ಪ೦ಡಿತರ...
1 78 79 80 81 82 85
Page 80 of 85