Thursday, January 23, 2025

ಉಡುಪಿ

ಉಡುಪಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ಇದರ ವತಿಯಿಂದ ಡಾ.ಬಿ. ಆರ್. ಅಂಬೇಡ್ಕರ್ ರವರ 64ನೇ ಪುಣ್ಯತಿಥಿಯ ಪ್ರಯುಕ್ತ  ಸಾಮಾಜಿಕ ಸಾಮರಸ್ಯ ದಿನ-ಕಹಳೆ ನ್ಯೂಸ್

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ಇದರ ವತಿಯಿಂದ  ಸಂವಿದಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ರವರ 64ನೇ ಪುಣ್ಯತಿಥಿಯ ಪ್ರಯುಕ್ತ  ಸಾಮಾಜಿಕ ಸಾಮರಸ್ಯ ದಿನವನ್ನು ಇಂದು ಸರ್ಕಾರಿ ಬಾಲಕರ ವಸತಿಗ್ರಹ, ಕುಕ್ಕೆಕಟ್ಟೆ-ಉಡುಪಿಯಲ್ಲಿ ಆಚರಿಸಲಾಯಿತು . ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಪ್ರಾಸ್ತಾವಿಕ ಭಾಷಣ ಮಾಡಿದರು, ಹಿರಿಯ ಕಾರ್ಯಕರ್ತರಾದ ಡಾ|ಶಿವಾನಂದ ನಾಯಕ್ ಇವರು ಉಪನ್ಯಾಸ ಭಾಷಣ ನೀಡಿದರು, ಜಿಲ್ಲಾ ಪ್ರಮುಖರಾದ ರಾಜಶೇಖರ್ ಧನ್ಯವಾದ...
ಉಡುಪಿ

ಅಕಾಲಿಕ ಮಳೆ: ಸಿಡಿಲು ಬಡಿದು ವರ್ಕ್ ಫ್ರಂ ಹೋಮ್ ಉದ್ಯೋಗಿ ಸಾವು – ಕಹಳೆ ನ್ಯೂಸ್

ಉಡುಪಿ : ಗುರುವಾರ ರಾತ್ರಿ ಕರಾವಳಿ ಭಾಗದಲ್ಲಿ ಸುರಿದ ಸಿಡಿಲು-ಮಿಂಚು ಸಹಿತ ಮಳೆಗೆ, ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಬಳಿ ನಡೆದಿದೆ. ಉಡುಪಿಯ ಬ್ರಹ್ಮಾವರ ತಾಲೂಕು ವಂಡಾರಿನ ಬೋರ್ಡಕಲ್ಲಿನ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಚೇತನ್ (24) ಮೃತಪಟ್ಟ ಯುವಕನಾಗಿದ್ದಾನೆ. ಮಳೆ ಬರುತ್ತಿದ್ದ ಸಂದರ್ಭದಲ್ಲಿ ಚೇತನ್ ಮನೆಯೊಳಗಡೆ ಲ್ಯಾಪ್ ಟಾಪ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಸಿಡಿಲು ಬಡಿದಾಗ ಗಂಭೀರವಾಗಿ ಅಸ್ವಸ್ಥಗೊಂಡ ಚೇತನ್ರನ್ನು ತತ್‌ಕ್ಷಣ ಬ್ರಹ್ಮಾವರದ...
ಉಡುಪಿ

ಉಡುಪಿ: ಕರ್ನಾಟಕ ಬಂದ್‌ಗೆ ಸಿಗದ ಬೆಂಬಲ – ಕಹಳೆ ನ್ಯೂಸ್

ಉಡುಪಿ : ರಾಜ್ಯ ಸರಕಾರವು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಇಂದಿನ ಬಂದ್‌ಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಜಿಲ್ಲೆಯಲ್ಲಿ ಯಾವುದೇ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಣೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಉಡುಪಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಅಂಗಡಿಮುಗ್ಗಟ್ಟುಗಳು ಎಂದಿನಂತೆ ತೆರೆದಿರುವುದು ಕಂಡುಬಂದಿದೆ. ಜನ ಹಾಗೂ ವಾಹನ ಸಂಚಾರ ಸಾಮಾನ್ಯವಾಗಿದ್ದು, ಉಡುಪಿ ಸರ್ವಿಸ್,...
ಉಡುಪಿ

ದ್ವಿಚಕ್ರ ವಾಹನಕ್ಕೆ ಫಾರ್ಚುನರ್ ಡಿಕ್ಕಿ, ಯುವತಿ ಸಾವು : ಉಡುಪಿಯಲ್ಲಿ ಸಂಭವಿಸಿದ ದುರಂತ! -ಕಹಳೆ ನ್ಯೂಸ್

ಉಡುಪಿ: ದ್ವಿಚಕ್ರ ವಾಹನಕ್ಕೆ ಫಾರ್ಚೂನ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸಾವನ್ನಪ್ಪಿ, ಆಕೆಯ ಸ್ನೇಹಿತೆ ಗಂಭೀರ ಗಾಯಗೊಂಡ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 22ರಲ್ಲಿ ನಡೆದಿದೆ. ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ (24) ಮೃತಪಟ್ಟ ಯುವತಿ. ಉಜಿರೆ ಮೂಲದ ಸ್ನೇಹಿತೆ ಪ್ರಜ್ನಾ (25) ಗಂಭೀರ ಗಾಯಗೊಂಡಿದ್ದಾರೆ. ಉಡುಪಿಯ ಕುಂದಾಪುರದಿಂದ ಬ್ರಹ್ಮಾವರ ಕಡೆ ಸ್ಕೂಟಿಯಲ್ಲಿ ಯುವತಿಯರು ತೆರಳುತ್ತಿದ್ದಾಗ, ಫಾರ್ಚೂನ್ ವಾಹನ ವೇಗವಾಗಿ ಬಂದು ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ,...
ಉಡುಪಿ

ಮಲ್ಪೆಯ ಬೋಟು ಮಹಾರಾಷ್ಟ್ರ ಸಮೀಪದ ಸಮುದ್ರದಲ್ಲಿ ಮುಳುಗಡೆ – ಕಹಳೆ ನ್ಯೂಸ್

ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟೊಂದು ಗೋವಾ ಮಹಾರಾಷ್ಟ್ರದ ಸಮೀಪದ ಸಮುದ್ರದಲ್ಲಿ ಗುರುವಾರ ಮುಳುಗಡೆಗೊಂಡಿದೆ. ಈ ವೇಳೆ ಬೋಟ್‌ನಲ್ಲಿದ್ದ ಏಳು ಮೀನುಗಾರರನ್ನು ರಕ್ಷಿಸಲಾಗಿದೆ. ಮಲ್ಪೆ ಹನುಮಾನ್ ನಗರದ ತಾರಾನಾಥ ಕುಂದರ್ ಎಂಬವರಿಗೆ ಸೇರಿದ 'ಮಥುರಾ' ಹೆಸರಿನ ಆಳಸಮುದ್ರ ಬೋಟು ನ.17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ನ.26ರಂದು ಮಧ್ಯಾಹ್ನ 12:30ರ ಸುಮಾರಿಗೆ ಗೋವಾ-ಮಹಾರಾಷ್ಟ್ರ ಮಧ್ಯೆ ಸುಮಾರು 22 ಮಾರು ಆಳ ದೂರ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬೋಟಿನ...
ಉಡುಪಿ

ಉಡುಪಿ: ವಿಕಲಚೇತನ ಯುವತಿಗೆ ಬಾಳ ಸಂಗಾತಿಯಾದ ಯುವಕ – ಕಹಳೆ ನ್ಯೂಸ್

ಉಡುಪಿಯ ಯುವತಿಯೋರ್ವಳ ಕಾಲುಗಳೆರಡು ಬಲಹೀನವಾದರೂ ಅದೃಷ್ಟಬಲ ಮಾತ್ರ ಚೆನ್ನಾಗಿದೆ. ದುಬೈನಲ್ಲಿ ಉದ್ಯೋಗ ಮಾಡುತ್ತಿರುವ ಸಂದೀಪ್ ಎಂಬ ಯುವಕ ತಾನೇ ಮುಂದೆ ಬಂದು ಈ ಯುವತಿಯ ಬಾಳಿಗೆ ಬೆಳಕಾಗಿದ್ದಾನೆ. ಉಡುಪಿಯ ಸುನೀತಾ ಪೊಲೀಯೋ ಪೀಡಿತೆ. ತನ್ನ ಎರಡೂ ಕಾಲುಗಳ ಬಲ ಕಳೆದುಕೊಂಡಿದ್ದಳು. ಪಿಯುಸಿವರಗೆ ಓದಿಕೊಂಡು ತಂದೆ-ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ದೌರ್ಭಾಗ್ಯಕ್ಕೆ ಈಡಾದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ...
ಉಡುಪಿ

ಮನ ನೊಂದ ಪದವಿಧರ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ-ಕಹಳೆ ನ್ಯೂಸ್

ಉಡುಪಿ: ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿರುವ ಯುವಕನನ್ನು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ, ದೊಡ್ಡಣ ಗುಡ್ಠೆ ಡಾ.ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನಿವಾಸಿಯಾದ ಯುವಕ ಡಿಪ್ಲೋಮಾ ಪದವಿ ಪಡೆದಿದ್ದು, ಉದ್ಯೋಗ ಇಲ್ಲದೆ ಮಾನಸಿಕವಾಗಿ ನೊಂದು ಮನೆ ಬಿಟ್ಟು ಬಂದಿದ್ದೇನೆ ಎಂದು ಆಪ್ತ ಸಮಾಲೋಚನೆ ಪ್ರಕ್ರಿಯೆಯಲ್ಲಿ ಹೇಳಿಕೊಂಡಿದ್ದಾನೆ. ಯುವಕ ಪತ್ತೆಯಾಗಿರುವ...
ಉಡುಪಿಕುಂದಾಪುರದಕ್ಷಿಣ ಕನ್ನಡಸಂತಾಪಸುದ್ದಿ

ಹಿರಿಯ ಯಕ್ಷಗಾನ ಕಲಾವಿದ, ಅಪ್ರತಿಮ ವಾಗ್ಮಿ ಮಲ್ಪೆ ವಾಸುದೇವ ಸಾಮಗ ಕೊರೊನಾಕ್ಕೆ ಬಲಿ ; ಶಾಶ್ವತವಾಗಿ ತಿರುಗಾಟ ನಿಲ್ಲಿಸಿದ ಸಂಯಮ’ದ ಸಾಹುಕಾರ – ಕಹಳೆ ನ್ಯೂಸ್

ಉಡುಪಿ: ಯಕ್ಷಗಾನ ರಂಗದ ಹಿರಿಯ ಕಲಾವಿದ, ಸಂಘಟಕರಾದ ಮಲ್ಪೆ ವಾಸುದೇವ ಸಾಮಗ ಅವರು ಅಲ್ಪ ಕಾಲದಿಂದ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಾಕ್ಪಟುತ್ವದಿಂದ ಹೆಸರು ಗಳಿಸಿದ್ದ ವಾಸುದೇವ ಸಾಮಗ (71) ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು.   ತೆಂಕು ಬಡಗು ತಿಟ್ಟು ಅಪ್ರತಿಮ ಕಲಾವಿದ ಚತುರ ಮಾತುಗಾರ ಯಕ್ಷಗಾನ ತಾಳಮದ್ದಳೆ ತಂಡ ಕಟ್ಟಿ ಮೊಟ್ಟಮೊದಲು ಸಂಚಾರ ಆರಂಭಿಸಿದ ತಾಳಮದ್ದಳೆ ಅರ್ಥದಾರಿಯಾಗಿದ್ದಾರೆ. ಮಲ್ಪೆ ರಾಮದಾಸ ಸಾಮಗ...
1 79 80 81 82 83 85
Page 81 of 85