Saturday, April 12, 2025

ಉಡುಪಿ

ಉಡುಪಿ

ಉಡುಪಿಯ ಪ್ರಖ್ಯಾತ ನೋವೆಲ್ಟಿ ಜ್ಯುವೆಲ್ಲರಿ ಮಾಲೀಕ ಜಿ. ಜಯ ಆಚಾರ್ಯ ಅವರಿಗೆ ಆಭರಣ ತಯಾರಿಸಿಕೊಡುವ ನೆಪದಲ್ಲಿ ವಂಚನೆ ; ದೂರು ದಾಖಲು-ಕಹಳೆ ನ್ಯೂಸ್

ಉಡುಪಿ : ಉಡುಪಿಯ ಪ್ರಖ್ಯಾತ ನೋವೆಲ್ಟಿ ಜ್ಯುವೆಲ್ಲರಿ ಮಾಲೀಕ ಜಿ. ಜಯ ಆಚಾರ್ಯ ಅವರಿಗೆ ಆಭರಣ ತಯಾರಿಸಿಕೊಡುವ ನೆಪದಲ್ಲಿ ವ್ಯಕ್ತಿಯೋರ್ವ 4 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಚಿನ್ನದ ಕರಿಮಣಿ ತಯಾರಿಸಿ ಕೊಡುವುದಾಗಿ ಹೇಳಿ, ಜಯ ಆಚಾರ್ಯ ಅವರಿಗೆ ಪರಿಚಯಸ್ಥ ಮಂಜುನಾಥ ಆಚಾರ್ಯ ಎಂಬಾತ ಫೆ.13 ರಂದು 92.970 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗಿದ್ದು, ಬಳಿಕ ಅಭರಣವಾಗಲಿ ಅಥವಾ ಚಿನ್ನದ ಗಟ್ಟಿಯಾಗಲಿ ಹಿಂತಿರುಗಿಸದೆ ವಂಚನೆ ಎಸಗಿದ್ದಾನೆ. ಈ ಬಗ್ಗೆ...
ಉಡುಪಿ

ಉಡುಪಿ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ಅಪಾರ ಹಾನಿ-ಕಹಳೆ ನ್ಯೂಸ್

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ಧಾರಾಕಾರ ಮಳೆ ಸುರಿದು ಮನೆ ಹಾನಿಯಾಗಿ, ಮರಗಳು ಬಿದ್ದ ಘಟನೆ ನಡೆದಿದೆ. ಮಿಂಚಿನಿಂದಾಗಿ ಬ್ರಹ್ಮಾವರ ತಾಲೂಕಿನ ನಾಗರತ್ನ ಭುಜಂಗ ಶೆಟ್ಟಿಗೆ ಸೇರಿದ ಮನೆ ಹಾನಿಯಾಗಿದ್ದು, ಈ ಘಟನೆ ನಡೆದಾಗ ಮನೆಯಲ್ಲಿ 6 ಜನರಿದ್ದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಮನೆಯ ಅನೇಕ ಉಪಕರಣಗಳು ಹಾನಿಗೊಂಡಿದ್ದು, ಮರವೊಂದು ಕೆಮ್ಮಣ್ಣುವಿನ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದು, ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಿ ಬಳಿಕ ಸ್ಥಳೀಯ ಪಂಚಾಯತ್...
ಉಡುಪಿ

ಈದು ಶ್ರೀ ವನದುರ್ಗಾ ದೇವಸ್ಥಾನದ ವರ್ಧಂತ್ಯುತ್ಸವ ಹಾಗೂ ಶ್ರೀ ಪಂಚದುರ್ಗಾ ಮಂತ್ರ ಹೋಮ-ಕಹಳೆ ನ್ಯೂಸ್

ಉಡುಪಿ : ಈದು ಶ್ರೀ ವನದುರ್ಗಾ ದೇವಸ್ಥಾನ ಇದರ ವರ್ಧಂತ್ಯುತ್ಸವ ಹಾಗೂ ಶ್ರೀ ಪಂಚದುರ್ಗಾ ಮಂತ್ರ ಹೋಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಏಪ್ರಿಲ್ 9ರಂದು ಜರಗಿತು. ಪ್ರಾತಃಕಾಲ ಗಣಹೋಮ, ಶ್ರೀ ಪಂಚದುರ್ಗಾ ಮಂತ್ರ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿ ಈ ಪ್ರಯುಕ್ತ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹೊಸ್ಮಾರು ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ಶ್ರೀ ಶ್ರೀ...
ಉಡುಪಿ

ತೊಕ್ಕೊಟ್ಟು ಜಂಕ್ಷನ್ ಬಳಿ ಕೊರಗಜ್ಜನ ಕೋಲ ನಡೆಯುತ್ತಿದ್ದಾಗ ಕಲ್ಲೆಸೆದ ಕೀಡಿಕೇಡಿಯನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು-ಕಹಳೆ ನ್ಯೂಸ್

ಉಡುಪಿ : ತೊಕ್ಕೊಟ್ಟು ಜಂಕ್ಷನ್ ಬಳಿ ಕೊರಗಜ್ಜನ ಕೋಲ ನಡೆಯುತ್ತಿದ್ದ ವೇಳೆ ಕಟ್ಟಡದ ಮೇಲೆ ನಿಂತು ವ್ಯಕ್ತಿಯೊಬ್ಬ ಪೊಲೀಸರ ವಾಹನಕ್ಕೆ ಕಲ್ಲೆಸೆದು ಗಲಭೆ ಉಂಟುಮಾಡಲು ಯತ್ನಿಸಿದ ಘಟನೆ ಸಂಭವಿಸಿದೆ. ವ್ಯಕ್ತಿಯನ್ನು ಸ್ಥಳದಲ್ಲೇ ಇದ್ದ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಮ್ಮದ್ ಹಫೀಜ್ ಎಂದು ಗುರುತಿಸಲಾಗಿದೆ. ಕೊರಗಜ್ಜನ ಕೋಲ ನಡೆಯುತ್ತಿದ್ದಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು, ಈ ವೇಳೆ ಗಲಭೆ ಸೃಷ್ಟಿಸಲು ಪ್ರಯತ್ನಿಸಿರುವ ಹಫೀಜ್, ಕಟ್ಟಡದ ಮೇಲಿನಿಂದ ಕಲ್ಲೊಂದನ್ನು...
ಉಡುಪಿ

ಕಳೆದ ಜು. 03ರ ಮಳೆಗೆ ಕೊಚ್ಚಿಹೋಗಿದ್ದ ವ್ಯಕ್ತಿಯ ಅಸ್ಥಿಪಂಜರ ಕಾಪುವಿನಲ್ಲಿ ಪತ್ತೆ-ಕಹಳೆ ನ್ಯೂಸ್

ಉಡುಪಿ : ಮಹಾಮಳೆಯ ಸಂದರ್ಭದಲ್ಲಿ ಕಾಣೆಯಾಗಿದ್ದ ವ್ಯಕ್ತಿಯೋರ್ವರ ಅಸ್ತಿ ಪಂಜರವು ಹೊಳೆಯ ಸಮೀಪ ಪತ್ತೆಯಾದ ಘಟನೆ ಕಾಪುವಿನಲ್ಲಿ ನಡೆದಿದೆ. ಮೃತರನ್ನು 72 ವರ್ಷದ ಶ್ರೀನಿವಾಸ ನಾಯ್ಕ ಎಂದು ಗುರುತಿಸಲಾಗಿದೆ. ಇವರು 2020 ರ ಜು. 03ರಂದು ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪದಲ್ಲಿರುವ ಹೊಳೆಯ ಸೇತುವೆ ಬದಿಯಲ್ಲಿ ಕಾಣೆಯಾಗಿದ್ದವರು ಈವರೆಗೆ ಪತ್ತೆಯಾಗಿಲ್ಲ. ಆದರೆ ನಿನ್ನೆ ಬೆಳಿಗ್ಗೆ ಶ್ರೀನಿವಾಸ ಅವರ ಪತ್ನಿ ರತ್ನ ಎಂಬವರಿಗೆ ಸ್ಥಳೀಯರೊಬ್ಬರು ಕರೆಮಾಡಿ ಮಣಿಪುರದ ಮೂಡು ಕಲ್ಮಂಜೆ ಹೊಳೆಯ...
ಉಡುಪಿ

ಮನೆಯ ಎದುರು ನಿಲ್ಲಿಸಿದ್ದ ರಿಕ್ಷಾಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು-ಕಹಳೆ ನ್ಯೂಸ್

ಉಡುಪಿ : ಮನೆಯ ಎದುರು ನಿಲ್ಲಿಸಲಾದ ಅಟೋ ರಿಕ್ಷಾಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ 76ನೆ ಬಡಗುಬೆಟ್ಟು ಗ್ರಾಮದ ಬೈಲೂರು ಎನ್‍ಜಿಓ ಕಾಲನಿಯಲ್ಲಿ ನಡೆದಿದೆ. ಮನೆಯ ಗೇಟಿನ ಎದುರು ನಿಲ್ಲಿಸಿದ್ದ ಅಬ್ದುಲ್ ರಶೀದ್ ಎಂಬವರ ಅಟೋ ರಿಕ್ಷಾಕ್ಕೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಇದರಿಂದ ರಿಕ್ಷಾ ಸಂಪೂರ್ಣ ಸುಟ್ಟು ಹೋಗಿ ಸುಮಾರು 2,25,000ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ. ಇನ್ನು ಈ ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ...
ಉಡುಪಿ

ಉಡುಪಿಯ ಕಾಪುವಿನ ಮುದರಂಗಡಿಯಲ್ಲಿ ಆಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದು ಎರಡೂವರೆ ವರ್ಷದ ಮಗು ಮೃತ್ಯು-ಕಹಳೆ ನ್ಯೂಸ್

ಉಡುಪಿ : ಉಡುಪಿಯ ಕಾಪುವಿನ ಮುದರಂಗಡಿಯಲ್ಲಿ ಆಕಸ್ಮಿಕವಾಗಿ ಜಾರಿ ತೆರೆದ ಬಾವಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಏಪ್ರಿಲ್ 3 ರಂದು ಸಂಜೆ ನಡೆದಿದೆ. ಮೃತ ಮಗುವನ್ನು ಅದಮಾರಿನ ಜಯಲಕ್ಷ್ಮಿ ಮತ್ತು ಕೃಷ್ಣ ದಂಪತಿಗಳ ಪುತ್ರಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಶನಿವಾರ, ಇವರ ಕುಟುಂಬವು ನಗರದಲ್ಲಿ ಮಾರುಕಟ್ಟೆಗೆ ಬಂದಿದ್ದು, ಈ ಸಂದರ್ಭದಲ್ಲಿ ಮಗು ಆಡುವಾಗ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಪೋಷಕರು ವಸ್ತುಗಳನ್ನು ಖರೀದಿ ಮಾಡುತ್ತಿದ್ದ ಅಂಗಡಿಯ...
ಉಡುಪಿ

ಮಲ್ಪೆ ಬೀಚ್‍ನಲ್ಲಿ ನಿಲ್ಲಿಸಿದ್ದ ಬೀಚ್ ಕ್ಲೀನಿಂಗ್ ಯಂತ್ರಕ್ಕೆ ಬಳಸುವ ಟ್ರ್ಯಾಕ್ಟರ್ ಅಗ್ನಿಗಾಹುತಿ-ಕಹಳೆ ನ್ಯೂಸ್

ಉಡುಪಿ : ಗುರುವಾರ ಮುಂಜಾನೆ ಸುಮಾರು 4 ಗಂಟೆಗೆ ಮಲ್ಪೆ ಬೀಚ್‍ನಲ್ಲಿ ನಿಲ್ಲಿಸಿದ್ದ ಬೀಚ್ ಕ್ಲೀನಿಂಗ್ ಯಂತ್ರಕ್ಕೆ ಬಳಸುವ ಟ್ರ್ಯಾಕ್ಟರ್ ಅಗ್ನಿಗಾಹುತಿಯಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಮಲ್ಪೆ ಬೀಚ್‍ನಲ್ಲಿರುವ ಕಸಗಳನ್ನು ತೆಗೆಯುವ ಯಂತ್ರವನ್ನು ಎಳೆದೊಯ್ಯುವ ಟ್ರ್ಯಾಕ್ಟರನ್ನು ಯಂತ್ರದೊಂದಿಗೆ ನಿಲ್ಲಿಸಲಾಗಿತ್ತು. ಆದರೆ ಗುರುವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಟ್ಯ್ರಾಕ್ಟರ್ ಅಗ್ನಿಗಾಹುತಿಯಾಗಿದೆ. ಇದು ಆಕಸ್ಮಿಕ ಘಟನೆಯೇ ಅಥವಾ ದುಷ್ಕರ್ಮಿಗಳ ಕೃತ್ಯವೇ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಇನ್ನು ಟ್ಯ್ರಾಕ್ಟರ್...
1 84 85 86 87 88 95
Page 86 of 95
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ