ಸುನಂದಾ ಬೆಳಗಾಂವಕರ್ ಅವರ ಕೃತಿಗಳಲ್ಲಿ ಧಾರವಾಡ ಜೀವಂತವಾಗಿದೆ: ಡಾ. ಸುಭಾಷ್ ಪಟ್ಟಾಜೆಯವರ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಪ್ರೊ. ರಾಘವೇಂದ್ರ ಪಾಟೀಲ್-ಕಹಳೆ ನ್ಯೂಸ್
ಧಾರವಾಡ: ಸುನಂದಾ ಬೆಳಗಾಂವರರ ಕೃತಿಗಳಲ್ಲಿ ಧಾರವಾಡದ ಮಣ್ಣಿನ ಗಂಧವಿದೆ. ಅವರ ಬರಹಗಳನ್ನು ಪರಿಸರ ವಿಮರ್ಶೆಯ ದೃಷ್ಟಿಕೋನದಿಂದ ಅಧ್ಯಯನ ಮಾಡಲು ಅವಕಾಶವಿದೆ. ಅವರು ತಮ್ಮ ಬರಹಗಳಲ್ಲಿ ಆಧುನಿಕ ಜಗತ್ತಿನ ಸೂಕ್ಷ್ಮ ವಿಚಾರಗಳನ್ನು ಮಂಡಿಸಿದ್ದಾರೆ ಎಂದು ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ಹೇಳಿದರು. ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆಯವರು ಬರೆದ 'ಸುನಂದಾ ಬೆಳಗಾಂವಕರ ವ್ಯಕ್ತಿತ್ವ ಸಾಹಿತ್ಯ' ಎಂಬ ಪುಸ್ತಕವನ್ನು ಧಾರವಾಡ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಅವರು...