ಭಾರತೀಯ ಚಿಂತನೆಗಳ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಅಂಬಿಕಾ ಸಂಸ್ಥೆಗಳು : ಭಾರತೀಯತೆ, ಆತ್ಮವಿಜ್ಞಾನಗಳ ಮೂಲಕ ಪುತ್ತೂರಿನಲ್ಲಿ ಶಿಕ್ಷಣ ಕ್ರಾಂತಿ – ಕಹಳೆ ನ್ಯೂಸ್
ಪುತ್ತೂರು: ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಶಿಕ್ಷಣ ಮಂಡಳಿಗಳು, ವಿಶ್ವವಿದ್ಯಾನಿಯಗಳಿಂದ ಉಕ್ತವಾದ ಪಠ್ಯವಿಚಾರಗಳ ಬಗೆಗೆ ಚರ್ಚೆ ನಡೆಯುವುದಿದೆ. ಪಠ್ಯಕ್ರಮ ಆಧಾರಿತ ನಾನಾ ಬಗೆಯ ಪ್ರಬಂಧ ಮಂಡನೆಗಳು, ಚರ್ಚಾಗೋಷ್ಠಿಗಳು ನಡೆಯುತ್ತಿರುತ್ತವೆ. ಹಾಗಾಗಿ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಶಿಕ್ಷಣ ಸಂಸ್ಥೆಯೆಂದರೆ ಹೀಗೆಯೇ ಎಂಬ ಕಲ್ಪನೆ ಆಳವಾಗಿ ಬೇರೂರಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ಪಾಶ್ಚಿಮಾತ್ಯ ಶಿಕ್ಷಣ ಕಲ್ಪನೆಗಳನ್ನು ತಲೆಕೆಳಗು ಮಾಡಿ, ಒಂದು ರೀತಿಯಲ್ಲಿ ಪ್ರವಾಹದ ವಿರುದ್ಧ ಈಜಿದಂತೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿ ರೂಪುಗೊಂಡಿರುವ ಪುತ್ತೂರಿನ...