ದಿ|ಕಂಡ್ಲೂರುನರಸಿಂಹ ಜೋಗಿ ಹಾಗೂ ದಿ|ಶ್ರೀಮತಿ ಗಿರಿಜಾನರಸಿಂಹ ಜೋಗಿ ಸ್ಮರಣಾರ್ಥ ನೋಟ್ ಪುಸ್ತಕ ಕ್ರೀಡಾ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ- ಕಹಳೆ ನ್ಯೂಸ್
"ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸುವ, ವಿದ್ಯಾರ್ಥಿಗಳ ಸಾಧನೆ ಹಿಂದಿರುವ ಶಿಕ್ಷಕರನ್ನು ಗೌರವಿಸುವುದರೊಂದಿಗೆ, ಅಬ್ದುಲ್ ಕಲಾಂ ಮತ್ತು ವಿವೇಕಾನಂದರು ನಮ್ಮ ಬದುಕಿನ ಆದರ್ಶವಾಗಬೇಕು. ನಮ್ಮಿಂದ ನಮ್ಮ ತಂದೆ ತಾಯಿ ಗುರುತಿಸಿಕೊಳ್ಳುವಂತಾದರೆ ಅದು ನಮ್ಮ ಬದುಕಿನ ಬಹುದೊಡ್ಡ ಸಾರ್ಥಕತೆ" ಎಂದು ಶ್ರೀ ಶ್ರೀನಿವಾಸ ಜೋಗಿ ಮಾಲಕರು ,ಶ್ರೀ ಭವಾನಿ ಕಂಗನ್ ಸ್ಟೋರ್ಸ್ ಬೆಂಗಳೂರು ಇವರು ಹೇಳಿದರು. ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿಯ ವಿದ್ಯಾರ್ಥಿಗಳಿಗೆ ತಮ್ಮ ತಂದೆ ತಾಯಿಯ ಸವಿನೆಪಿನಲ್ಲಿ ಪ್ರತಿ ವರ್ಷ...