Tuesday, January 21, 2025

ಶಿಕ್ಷಣ

ಉಡುಪಿಶಿಕ್ಷಣಸುದ್ದಿ

ಉಡುಪಿ ಕ್ಷೇತ್ರದ ಸರ್ಕಾರಿ ಶಾಲೆಗಳ 20,000 ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಸ್ವಾಗತ : ಯಶ್ ಪಾಲ್ ಸುವರ್ಣ– ಕಹಳೆ ನ್ಯೂಸ್

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಕಾರಿ ಹಾಗೂ ಅನುದಾನಿತ ಶಾಲೆಗಳ 20,000 ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಸ್ವಾಗತಿಸುವುದಾಗಿ ಪುಷ್ಪಾನಂದ ಫೌಂಡೇಶನ್ ಪ್ರವರ್ತಕರಾದ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಪುಷ್ಕನಂದ ಫೌಂಡೇಶನ್ ವತಿಯಿಂದ ಮೇ 31 ರಂದು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 121 ಶಾಲೆಯ 20 ಸಾವಿರ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲಾ ಪುನರಾರಂಭದ ಅಂಗವಾಗಿ ಶಾಸಕರು ವಿವಿಧ ಶಾಲೆಗಳಿಗೆ ಭೇಟಿ ನೀಡಿ...
ದಕ್ಷಿಣ ಕನ್ನಡಮಂಗಳೂರುಶಿಕ್ಷಣಸುದ್ದಿ

ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಗಳ ಬಗ್ಗೆ ಕೇರಳ ರಾಜ್ಯಪಾಲ ಆರಿಫ್ ಖಾನ್ ಮೆಚ್ಚುಗೆ – ಕಹಳೆ ನ್ಯೂಸ್

ಮಂಗಳೂರು : ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪಿತವಾದ ಕೆನರಾ ಶಿಕ್ಷಣ ಸಂಸ್ಥೆ, 133 ವರ್ಷಗಳ ಇತಿಹಾಸದಲ್ಲಿ ಶಿಕ್ಷಣಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದು, ಲಕ್ಷಾಂತರ ನಾಗರಿಕರ ಉಜ್ವಲ ಬದುಕಿಗೆ ಕಾರಣೀಕರ್ತರಾಗಿರುವ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಕೊಡುಗೆ ಸ್ಮರಣೀಯವಾದದು ಎಂದು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅಭಿಪ್ರಾಯಪಟ್ಟರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷರಾದ ವಾಸುದೇವ್ ಕಾಮತ್ ಹಾಗೂ ಆಡಳಿತ ಮಂಡಳಿಯ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈಯವರು ಮಂಗಳೂರಿನಲ್ಲಿ ಸೋಮವಾರ ಕೇರಳ ರಾಜ್ಯಪಾಲರನ್ನು...
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಶೌರ್ಯ ವಿಪತ್ತು ತಂಡದಿಂದ ಗೋಳ್ತಮಜಲು ಶಾಲೆ ಅಪಾಯಕಾರಿ ಕೊಠಡಿ ತೆರವು – ಕಹಳೆ ನ್ಯೂಸ್

ಗೋಳ್ತಮಜಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಅಪಾಯಕಾರಿಯಾದ ಎರಡು ಕೊಠಡಿಗಳು ಶಾಲಾರಂಭ ಸಮಯ ಮಕ್ಕಳಿಗೆ ತೊಂದರೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಲ್ಲಡ್ಕ ವಲಯದ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನದ ಮೂಲಕ ತೆರವು ಮಾಡಿದೆ. ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸಿ ಎಚ್ಚರಿಸಿದ ಬಳಿಕ ಇಲಾಖೆ ಎಚ್ಚೆತ್ತುಕೊಂಡು ಕಟ್ಟಡವನ್ನು ತೆರವುಗೊಳಿಸುವ ಸಾಹಸದ ಕೆಲಸಕ್ಕೆ ಕೈ ಹಾಕಿದ್ದು, ಈ ಜವಾಬ್ದಾರಿಯನ್ನು ಮುಖ್ಯ ಶಿಕ್ಷಕಿ ಹಾಗೂ ಎಸ್.ಡಿ.ಎಂ.ಸಿ.ತಲೆಗೆ ಹಾಕಲಾಗಿತ್ತು. ಇದೀಗ ಶಾಲಾ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಪುತ್ತೂರು ತಾಲೂಕಿನ ಬೆಥನಿ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಶಾಲೆಗಳ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಕಾರ್ಯಗಾರ – ಕಹಳೆ ‌ನ್ಯೂಸ್

ಪುತ್ತೂರು ತಾಲೂಕಿನಲ್ಲಿ ಬೆಥನಿ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಶಾಲೆಗಳಾದ ಬೆಥನಿ ಪ್ರೌಢಶಾಲೆ, ಬೆಥನಿ ಹಿರಿಯ ಪ್ರಾಥಮಿಕ ಶಾಲೆ ಪಾಂಗ್ಲಾಯ್ ಮತ್ತು ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಕಾರ್ಯಗಾರವು ಬೆಥನಿ ಶಾಲೆಯ ಸಭಾಂಗಣದಲ್ಲಿ,ಬೆಥನಿ ಶಾಲಾ ಸಂಚಾಲಕರಾದ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್ ಅಧ್ಯಕ್ಷತೆಯಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾದ ವಂದನೀಯ ಭಗಿನಿ ಅನ್ನಾ ಮರಿಯ ಕಾರ್ಯದರ್ಶಿಗಳು, ಜೀವಂಧಾರ ಸಮಾಜ ಸೇವಾ ಸಂಘ ಕುಲಶೇಖರ ರವರು...
ಬೆಂಗಳೂರುರಾಜ್ಯಶಿಕ್ಷಣಸುದ್ದಿ

ರಾಜ್ಯದ ಶಾಲೆಗಳಲ್ಲಿ 1 ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ- ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ 1 ನೇ ತರಗತಿ ಪ್ರವೇಶಕ್ಕೆ ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ನಿಗದಿಪಡಿಸಿರುವ ವಯೋಮಿತಿ ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಎಲ್‌ ಕೆಜಿ ದಾಖಲಾತಿಗೆ ಆಯಾ ಶೈಕ್ಷಣಿಕ ವರ್ಷದ ಜೂನ್‌ 1ಕ್ಕೆ ಕಡ್ಡಾಯವಾಗಿ 4 ವರ್ಷ ಪೂರ್ಣಗೊಂಡಿರಬೇಕೆಂದು 2023-24ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. 1ನೇ ತರಗತಿ ಪ್ರವೇಶಕ್ಕೆ 2024-25ನೇ ಸಾಲಿನಿಂದ ಆಯಾ ಸಾಲಿನ ಜೂನ್‌ 1 ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂದು ಆದೇಶಿಸಲಾಗಿದೆ. ಆದರೆ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಸ್ಕಿಲ್ ಎಡ್ಜ್ ಕಾರ್ಯಾಗಾರಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು: ಕಲೆ, ವಾಣಿಜ್ಯ, ವಿಜ್ಞಾನ ಹೀಗೆ ಎಲ್ಲಾ ಕೋರ್ಸ್‍ಗಳಿಗೂ ಅತ್ಯುತ್ತಮ ಉದ್ಯೋಗಾವಕಾಶಗಳಿವೆ. ಆದರೆ ಆ ಅವಕಾಶಗಳು ಎಲ್ಲಿವೆ ಮತ್ತು ಹೇಗಿವೆ ಎಂಬುದನ್ನು ವಿದ್ಯಾರ್ಥಿಗಳು ಸಾಕಷ್ಟು ಪೂರ್ವದಲ್ಲಿಯೇ ತಿಳಿದುಕೊಳ್ಳಬೇಕು ಮಾತ್ರವಲ್ಲದೆ ಆ ಉದ್ಯೋಗಕ್ಕೆ ಭೇಕಾದ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‍ನ ಸ್ಥಾಪಕ ಡಾ.ಶ್ರೀಶ ಭಟ್ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಒಂದು ವಾರದ...
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಎನ್ನೆಂಸಿ; “ಸ್ವಾವಲಂಬನೆಯಡೆಗೆ ಒಂದು ಹೆಜ್ಜೆ” ಕೌಶಲ್ಯ ತರಬೇತಿ ಶಿಬಿರ– ಕಹಳೆ ನ್ಯೂಸ್

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಸಮಾಜ ಕಾರ್ಯ ವಿಭಾಗ ಗ್ರಾಮ ಪಂಚಾಯತ್ ಪೆರಾಜೆ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಂಬಳಚೇರಿ ಇವರ ಜಂಟಿ ಆಶ್ರಯದಲ್ಲಿ ಸಮುದಾಯ ತರಬೇತಿ ಶಿಬಿರ "ಸ್ವಾವಲಂಬನೆಡೆಗೆ ಒಂದು ಹೆಜ್ಜೆ" ಭಾಗ- 2 ಕೌಶಲ್ಯ ತರಬೇತಿ ಶಿಬಿರವು ಮೇ 7 ಮಂಗಳವಾರದಿಂದ ಮೂರು ದಿನಗಳವರೆಗೆ ಎರಡು ವಿಭಾಗದಲ್ಲಿ ನಡೆಯಿತು. ಇದರಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಕಸಿ ಕಟ್ಟುವಿಕೆ ಹಾಗೂ ಫ್ಯಾಶನ್ ಡಿಸೈನ್ ಮತ್ತು...
ಉಡುಪಿಕೊಡಗುಚಿಕ್ಕಮಂಗಳೂರುದಕ್ಷಿಣ ಕನ್ನಡಮಂಗಳೂರುರಾಜಕೀಯರಾಜ್ಯಶಿಕ್ಷಣಸುದ್ದಿ

ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನಲೆ ; ಕುತೂಹಲ ಮೂಡಿಸಿದೆ ಡಾ. ಎಸ್ ಆರ್ ಹರೀಶ್ ಆಚಾರ್ಯ ಸುದ್ದಿಗೋಷ್ಠಿ – ಕಹಳೆ ನ್ಯೂಸ್

ಮಂಗಳೂರು : ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಈಗಾಗಲೇ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವುದು ಖಚಿತವಾದ ಹಿನ್ನಲೆಯಲ್ಲಿ ಬಿಜೆಪಿ, ಹಾಗೂ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ, ಮಂಗಳೂರು ವಿಶ್ವವಿದ್ಯಾನಿಲಯ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ಇಂದು ದಿನಾಂಕ 14.05.2024 ರಂದು ಮಧ್ಯಾಹ್ನ 3.30 ಕ್ಕೆ ನಗರದ ಹೋಟೆಲ್ ಒಷಿಯನ್ ಪರ್ಲ್ ಇಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದಿರುವುದು ಕುತೂಹಲ ಮೂಡಿಸಿದೆ. ಬಿಜೆಪಿ ಟಿಕೆಟ್...
1 17 18 19 20 21 48
Page 19 of 48