ಫಿಲೋಮಿನಾ ಪ ಪೂ ಕಾಲೇಜಿನ ಅಂಜನ್ ಗೌಡ ಜೆ. ಬಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ-ಕಹಳೆ ನ್ಯೂಸ್
ಪುತ್ತೂರು: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ),ಯಾದಗಿರಿ ಇದರ ಆಶ್ರಯದಲ್ಲಿ ಜ5 ಮತ್ತು 6 ರಂದು ಯಾದಗಿರಿಯಲ್ಲಿ ನಡೆದ 'ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟ 2024-25' ಟೆನ್ನಿಕಾಯ್ಟ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಅಂಜನ್ ಗೌಡ ಜಿ.ಬಿ ಇವರು ದಕ್ಷಿಣ ಕನ್ನಡ ಜಿಲ್ಲಾ ತಂಡದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಸೋಮವಾರಪೇಟೆ ನಿವಾಸಿಯಾದ ಜಿ.ಸಿ. ಬಿದ್ದಪ್ಪ...