‘ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ರಜತ ಮಹೋತ್ಸವದ ನಿಮಿತ್ತ ಮಂಗಳೂರಿನಲ್ಲಿ ವರ್ಧಂತ್ಯುತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್
ಮಂಗಳೂರು : ಕೂಟಕ್ಕಲ ಅಡಿಟೋರಿಯಮ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಕೊಡಿಯಾಲ್ ಬೈಲ್ ನಲ್ಲಿ `ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ'ದ ರಜತ ಮಹೋತ್ಸವದ ನಿಮಿತ್ತ ವರ್ಧಂತ್ಯುತ್ಸವ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಿನ್ನಿಗೋಳಿಯ ಶ್ರೀ ಶಕ್ತಿದರ್ಶನ ಆಶ್ರಮದ ಗುರುಗಳಾದ ಪಪೂ ದೇವಬಾಬರವರು ಈ ಕಾರ್ಯಕ್ರಮಕ್ಕೆ ಬರಲು ಅವಕಾಶ ಸಿಕ್ಕಿರುವ ಕುರಿತು ಸಂತಸವನ್ನು ವ್ಯಕ್ತ ಪಡಿಸಿದರು. ಹಿಂದೂಗಳಲ್ಲಿ ರಾಣಾ ಪ್ರತಾಪರಂತಹ ವೀರತೆ , ರಾಜಾ ವಿಕ್ರಮಾದಿತ್ಯರ ಧೀರತೆ ಮತ್ತು...