Saturday, November 23, 2024

ಶಿಕ್ಷಣ

ಮೂಡಬಿದಿರೆಶಿಕ್ಷಣಸುದ್ದಿ

ನಾಟಾ ಪರೀಕ್ಷೆಯಲ್ಲಿ ಎಕ್ಸ್ ಲೆಂಟ್ ವಿದ್ಯಾರ್ಥಿಗಳ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ – ಕಹಳೆ ನ್ಯೂಸ್

ಮೂಡುಬಿದಿರೆ : 2023ರ ಏಪ್ರಿಲ್ ತಿಂಗಳಿನಲ್ಲಿ ನಡೆದ ನಾಟಾ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಇದರಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ 3 ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ ಅರ್ಹತೆಯನ್ನು ಪಡೆದಿರುತ್ತಾರೆ.   ತೇಜಸ್ವಿನಿ ಎಲ್ ರೆಡ್ಡಿ, ಧ್ಯಾನ್ ಎಮ್ ಎ, ಅಮನ್ ಇರಾನಿ. ಇವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ...
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಕಲ್ಲಡ್ಕ : ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶ್ರೀರಾಮ ಪದವಿ ಪೂರ್ವ ಕಾಲೇಜಿಗೆ ಶೇ 95% ಫಲಿತಾಂಶ –ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾದ 301 ವಿದ್ಯಾರ್ಥಿಗಳಲ್ಲಿ 284 ವಿದ್ಯಾರ್ಥಿಗಳು ತೇರ್ಗಡೆಯಾಗಿ ಒಟ್ಟು ಶೇ 95 ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ 31 ರಲ್ಲಿ 30, ವಾಣಿಜ್ಯ ವಿಭಾಗದಲ್ಲಿ 171 ರಲ್ಲಿ 166, ವಿಜ್ಞಾನ ವಿಭಾಗದಲ್ಲಿ 99 ರಲ್ಲಿ 88 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ 83, ಪ್ರಥಮ ಶ್ರೇಣಿಯಲ್ಲಿ 161 ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಾಧನೆಗೈದಿದ್ದಾರೆ. ಗ್ರಾಮಾಂತರ ಪ್ರದೇಶದ...
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ವಂಶಸ್ಥೆ ಮಂಜುಶ್ರೀ ಕೆದಂಬಾಡಿ ಪಿಯು ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ – ಕಹಳೆ ನ್ಯೂಸ್

ಸುಳ್ಯ, ಏ 21: 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ವಂಶಸ್ಥರಾದ ಮಂಜುಶ್ರೀ ಕೆದಂಬಾಡಿ ಅವರು ಪಿಯು ಪರೀಕ್ಷೆಯಲ್ಲಿ 591 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.ಮಂಜುಶ್ರೀ ಕೆದಂಬಾಡಿ ಸುಳ್ಯದ ಉಬೇರಡ್ಕದ ತೀರ್ಥರಾಮ ಕೆದಂಬಾಡಿ ಮತ್ತು ಸಂಧ್ಯಾ ಕೆದಂಬಾಡಿ ದಂಪತಿಯ ಪುತ್ರಿ. ಕೆದಂಬಾಡಿ ರಾಮಯ್ಯಗೌಡರ ಐದನೇ ತಲೆಮಾರಿನ ಮಂಜುಶ್ರೀ ಆಗಿದ್ದು, ರಾಮಯ್ಯಗೌಡರು ಬ್ರಿಟಿಷರ ವಿರುದ್ಧ ನಾನಾ...
ದಕ್ಷಿಣ ಕನ್ನಡಮೂಡಬಿದಿರೆರಾಜ್ಯಶಿಕ್ಷಣಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ; ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಮೂಡಬಿದಿರೆ ವಿದ್ಯಾರ್ಥಿನಿ ಅನನ್ಯಾ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಪಿಯು ಮಂಡಳಿ ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಮೂಡಬಿದಿರೆ ವಿದ್ಯಾರ್ಥಿನಿ ಅನನ್ಯಾ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಪಡೆದುಕೊಂಡಿದ್ದಾರೆ. https://karresults.nic.in  ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ವೀಕ್ಷಿಸಬಹುದು. ರಾಜ್ಯದಲ್ಲಿ ಪ್ರಥಮ ರ್‍ಯಾಂಕ್‌ ಪಡೆದವರ ವಿವರ:  ಕಲಾ ವಿಭಾಗ : ತಬಸುಮ್ ಶೇಕ್, ಜಯನಗರ ಬೆಂಗಳೂರು...
ಉಡುಪಿದಕ್ಷಿಣ ಕನ್ನಡಬೆಂಗಳೂರುರಾಜ್ಯಶಿಕ್ಷಣಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ; ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ, ಕೊಡಗು ತೃತೀಯ ಮತ್ತು ಉತ್ತರ ಕನ್ನಡ ನಾಲ್ಕನೇ ಸ್ಥಾನ – ಕಹಳೆ ನ್ಯೂಸ್

ಬೆಂಗಳೂರು, ಏ 21 :2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಪಿಯು ಮಂಡಳಿ ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. https://karresults.nic.in  ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ವೀಕ್ಷಿಸಬಹುದು. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ.61.22, ವಾಣಿಜ್ಯ ವಿಭಾಗದಲ್ಲಿ ಶೇ.75.89, ವಿಜ್ಞಾನ ವಿಭಾಗದಲ್ಲಿ ಶೇ.85.71 ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ(ಶೇ.95) ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ, ಕೊಡಗು...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಶ್ರೀಮತಿ ಶ್ವೇತಾಂಬಿಕಾ ಪಿ. ಅವರಿಗೆ ಪಿ.ಎಚ್.ಡಿ – ಕಹಳೆ ನ್ಯೂಸ್

ಪೆರ್ನಾಜೆ: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ವೇತಾಂಬಿಕಾ ಪಿ. ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಡಾ.ಎಂ.ಆರ್. ಮದ್ದಾನಿ ಅವರ ಮಾರ್ಗದರ್ಶನದಲ್ಲಿ `ಅ ಸ್ಟಡಿ ಒನ್ ದ ಇಫೆಕ್ಟಿವ್ನೆಸ್ ಓಫ್ ಪ್ಲಾಂಟ್ ಎಕ್ಸಟ್ರಾಕ್ಟಸ್ ಆಸ್ ಕೊರೋಸಿವ್ ಇನ್ಹಿಬಿಟರ್ಸ್ ಓನ್ ಮೈಲ್ಡ್ ಸ್ಟೀಲ್ ಆಂಡ್ ಅಲುಮಿನಿಯಂ’ ಎಂಬ ಪ್ರಬಂಧಕ್ಕಾಗಿ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ನೀಡಿದೆ. ಇವರು ವಿಜಯಲಕ್ಷ್ಮಿ ಆರ್.ಭಟ್ ಮತ್ತು ರಾಘವೇಂದ್ರ ಭಟ್ ಪೆರ್ನಾಜೆ ಅವರ ಪುತ್ರಿ...
ಬೆಂಗಳೂರುರಾಜ್ಯಶಿಕ್ಷಣಸುದ್ದಿ

ಹೈಕೋರ್ಟಿನ ಹಿರಿಯ ನ್ಯಾಯವಾದಿಗಳು, ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಅರುಣ್ ಶ್ಯಾಮ್ ಕಾನೂನಿನ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ‘Alliance University’ಯಿಂದ ಡಾಕ್ಟರೇಟ್ ಪ್ರಧಾನ – ಕಹಳೆ ನ್ಯೂಸ್

ಬೆಂಗಳೂರು : ಹೈಕೋರ್ಟಿನ ಹಿರಿಯ ನ್ಯಾಯವಾದಿಗಳು, ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಅರುಣ್ ಶ್ಯಾಮ್ ಅವರು ಕಾನೂನಿನ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಇಂದು 'Alliance University'ಯಿಂದ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ ನಾರಾಯಣ್, ಲಾ ಕಮಿಷನ್ ಅಧ್ಯಕ್ಷ ರಾದ ನ್ಯಾಯಮೂರ್ತಿ ಬನ್ನೂರಮಠ SR ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು....
ಕಡಬದಕ್ಷಿಣ ಕನ್ನಡರಾಜ್ಯಶಿಕ್ಷಣಸುದ್ದಿ

ಜ.13: ಪೇಜಾವರ ಹಿರಿಯ ಶ್ರೀಗಳ ಹುಟ್ಟೂರು ರಾಮಕುಂಜಕ್ಕೆ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ..! ” ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ” ವಿಶೇಷ ಉಪನ್ಯಾಸ – ಕಹಳೆ ನ್ಯೂಸ್

ಅವರು ಜ.13ರಂದು ಅಪರಾಹ್ನ 2 ರಿಂದ 3.30ರ ತನಕ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ’ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಅವರು ತಿಳಿಸಿದ್ದಾರೆ....
1 27 28 29 30 31 43
Page 29 of 43