Saturday, January 18, 2025

ಶಿಕ್ಷಣ

ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಮೃದ್ಧಿ ಜೆ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ-ಕಹಳೆ ನ್ಯೂಸ್

ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಮೃದ್ಧಿ ಜೆ ಶೆಟ್ಟಿ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಹಾಗೂ ಹರಿಣಾಕ್ಷಿ ಜೆ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಕಾಲೇಜಿನ ದೈಹಿಕಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನ ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸಿ ತನ್ನ ಪ್ರತಿಭೆಯನ್ನು ಮೆರೆದ ವಿದ್ಯಾರ್ಥಿ-ಕಹಳೆ ನ್ಯೂಸ್

ಬಂಟ್ವಾಳ: ಕಡೇಶ್ವಾಲ್ಯ ಸರಕಾರಿ ಶಾಲೆಯ ವಿದ್ಯಾರ್ಥಿಯೋರ್ವ ತನ್ನಲ್ಲಿರುವ ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸಿ ತನ್ನ ಪ್ರತಿಭೆಯನ್ನು ಮೆರೆದಿದ್ದಾನೆ. ಕೆದಿಲ ಗ್ರಾಮದ ಗುಡ್ಡಕೋಡಿ ನಿವಾಸಿ ಲಿಂಗಪ್ಪ ನಾಯ್ಕ-ಆಶಾ ದಂಪತಿಯ ಪುತ್ರ, ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮೋಕ್ಷಿತ್ ನಾಯ್ಕ ಈಗ 2 ಕಿ.ಮೀ.ದೂರದ ಶಾಲೆಗೆ ಇದೇ ಸೈಕಲ್‌ನಲ್ಲಿ ಹೋಗುತ್ತಾನೆ. 9 ಸಾವಿರ ರೂ. ವೆಚ್ಚ ಮೋಕ್ಷಿತ್‌ಗೆ ಶಾಲೆಗೆ ಹೋಗಲು ಹೆತ್ತವರು ಸೈಕಲ್ ತೆಗೆದುಕೊಟ್ಟಿದ್ದರು. ಅದನ್ನು ಎಲೆಕ್ಟ್ರಿಕ್ ಸೈಕಲಾಗಿ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಜೇನು ಕೃಷಿ ಮತ್ತು ‘ನಾವು’ ವಿಶೇಷ ಉಪನ್ಯಾಸ -ಕಹಳೆ ನ್ಯೂಸ್

ಪುತ್ತೂರು: ನೆಹರುನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಇಕೋ ಕ್ಲಬ್ ಘಟಕ ವತಿಯಿಂದ ಮಂಗಳವಾರದAದು ಕಾಲೇಜಿನ ಸುಜ್ಞಾನ ದೀಪಿಕಾ ಸಭಾಂಗಣದಲ್ಲಿ ಜೇನು ಕೃಷಿ ಮತ್ತು ನಾವು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಜೇನು ಕೃಷಿಕರ ತರಬೇತುದಾರ ಮತ್ತು ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿ ಇದರ ಶಿಕ್ಷಕ ರಾಧಾಕೃಷ್ಣ ಆರ್ ಕೋಡಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿ, ವಿಶಿಷ್ಟ ಕೃಷಿ ವಿಧಾನವಾಗಿರುವಂತಹ ಜೇನು ಕೃಷಿಯಿಂದ ಪ್ರಕೃತಿ ಮತ್ತು ಮಾನವರಿಗೆ...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ವತಿಯಿಂದ ;ಪಾಲಕರ ಸಮಾವೇಶ-ಕಹಳೆ ನ್ಯೂಸ್

ಅಡ್ಯನಡ್ಕ: ಅಡ್ಯನಡ್ಕ ಎಜುಕೇಶನಲ್ ಸೊಸೈಟಿ(ರಿ) ವತಿಯಿಂದ ಪಾಲಕರ ಸಮಾವೇಶ ಕಾರ್ಯಕ್ರಮವು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಡಿಸೆಂಬರ್ 29ರಂದು ನಡೆಯಿತು. ಸುಂದರ ನಾಳೆಗೆ, ಪಾಲಕರ ಬೆಸುಗೆ ಹಾಗೂ ಸಮೃದ್ಧ ಸುಶಿಕ್ಷಿತ ಕುಟುಂಬ ಬಂಧಕ್ಕೆ ವಿಕಸನದ ದಿವ್ಯ ಸುಗಂಧ ಇದು ಸಮಾವೇಶದ ಘೋಷವಾಕ್ಯವಾಗಿತ್ತು. ಸಮಾವೇಶದಲ್ಲಿ  ಮಕ್ಕಳ ವಿಕಸನದಲ್ಲಿ ಪಾಲಕರ ಸ್ನೇಹಶೀಲ ಸಹಭಾಗಿತ್ವ  ವಿಷಯದಲ್ಲಿ ಚಿಂತನಗೋಷ್ಠಿ ನಡೆಯಿತು. ಜನತಾ ವಿದ್ಯಾಸಂಸ್ಥೆಗಳು ಅಡ್ಯನಡ್ಕ ಇದರ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ದೀಪ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪೋಷಕರ ಸಭೆ-ಕಹಳೆ ನ್ಯೂಸ್

 ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು. ಪರೀಕ್ಷಾ ಸಮಯ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಗೊಂದಲಗಳನ್ನು ಪರಿಹರಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಡೆಸಲಾದ ಈ ಸಭೆಯಲ್ಲಿ ಮುಖ್ಯವಾಗಿ ಮುಂಬರುವ ಪೂರ್ವ ಸಿದ್ಧತಾ ಪರೀಕ್ಷೆಗಳು, ಪ್ರಾಯೋಗಿಕ ಪರೀಕ್ಷೆಗಳು ಹಾಗೂ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ನಿಯಮಾವಳಿಗಳು, ಅದಕ್ಕಾಗಿ ವಿದ್ಯಾರ್ಥಿಗಳು ಮಾಡಬೇಕಾದ ತಯಾರಿಗಳ ಬಗ್ಗೆ ಹಲವು...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಅಂಬಿಕಾ ಸಿಬಿಎಸ್‌ಇ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ;ದೈನಂದಿನ ಜೀವನದ ಎಲ್ಲಾ ಚಟುವಟಿಕೆಯಲ್ಲಿ ಗಣಿತ ಬೆರೆತುಹೋಗಿದೆ : ಸುಬ್ರಹ್ಮಣ್ಯ-ಕಹಳೆ ನ್ಯೂಸ್

ಪುತ್ತೂರು: ಶ್ರೇಷ್ಠ ಭಾರತೀಯ ಗಣಿತ ತಜ್ಞ ರಾಮಾನುಜನ್ ಅವರು ಗಣಿತದ ಬಗ್ಗೆ ಅಪಾರವಾಗಿ ಒಲವನ್ನು ಹೊಂದಿದ್ದವರು. ಸಂಖ್ಯೆಯ ವಿಭಾಗವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಿ ತೋರಿಸಿದವರಲ್ಲದೇ, ಅನೇಕ ರೀತಿಯ ಪ್ರಮೇಯವನ್ನು ರಚಿಸಿದವರು ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಸುಬ್ರಹ್ಮಣ್ಯ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆಸಿದ ಗಣಿತ ದಿನಾಚರಣೆಯ ಮುಖ್ಯ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಪಠ್ಯೇತರ ಚಟುವಟಿಕೆಗಳು ಕೌಶಲ್ಯವನ್ನು ವೃದ್ಧಿಸುತ್ತವೆ -ಅನ್ನಪೂರ್ಣ ಪಿ.ಜಿ-ಕಹಳೆ ನ್ಯೂಸ್

ಪುತ್ತೂರು: ಕಾಲೇಜಿನಲ್ಲಿ ನಡೆಯುವ ವಿವಿಧ ಸಂಘದ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಕೌಶಲ್ಯವನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ. ಕಲಾವಿಭಾಗವನ್ನು ಆಯ್ಕೆಮಾಡಿಕೊಂಡ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಕೀಳರಿಮೆಗೆ ಒಳಗಾಗುವ ಅಗತ್ಯವಿಲ್ಲ. ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವವರ ಶೈಕ್ಷಣಿಕ ಹಿನ್ನೆಲೆಯನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ವಿದ್ಯಾಭ್ಯಾಸದ ಹಂತದಲ್ಲಿ ಬೇರೆ ಬೇರೆ ಚಟುವಟಿಕೆಗಳಲ್ಲಿ ನಾವು ಹೇಗೆ ತೊಡಗಿಸಿಕೊಂಡಿದ್ದೇವೆ ಎಂಬುದರ ಆಧಾರದ ಮೇಲೆ ನಮ್ಮ ಭವಿಷ್ಯದ ದಿನಗಳು ನಿಂತಿರುತ್ತವೆ. ಎಂದು ವಿವೇಕಾನಂದ ಮಹಾವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ...
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ಡಾ. ಕೆವಿಜಿ ಸಂಸ್ಮರಣೆ ಮತ್ತು ಪುಷ್ಪ ನಮನ-ಕಹಳೆ ನ್ಯೂಸ್

ಸುಳ್ಯ: ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ. ಕುರುಂಜಿ ವೆಂಕಟರಮಣ ಗೌಡರ 96 ನೇ ವರ್ಷದ ಜನ್ಮ ದಿನಾಚರಣೆ ಮತ್ತು ಪುಷ್ಪ ನಮನ ಕಾರ್ಯಕ್ರಮ ಡಿಸೆಂಬರ್ 26 ರಂದು ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ದೀಪ ಬೆಳಗಿ ಡಾ. ಕೆವಿಜಿ ಸಾಧನೆ ಹಾಗೂ ಅವರ ತತ್ವ ಆದರ್ಶಗಳ ಬಗ್ಗೆ ವಿವರಿಸಿದರು....
1 2 3 4 5 48
Page 3 of 48