ವಿವೇಕಾನಂದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶ್ರೀರಾಮೋತ್ಸವ -‘ವಿದ್ಯಾರಾಮ ಸ್ಮರಣೆ’ – ಕಹಳೆ ನ್ಯೂಸ್
ಪುತ್ತೂರು : ಅಯೋಧ್ಯೆಯ ಹೋರಾಟದ ಕಥೆಗಳನ್ನು ಆಲಿಸುವಾಗ ಮನದಲ್ಲಿ ಸಂತಸ ಮೂಡುತ್ತದೆ. ಆದರೆ ರಾಷ್ಟ್ರಗಳ ನಡುವೆ ನಡೆಯುವ ಹೋರಾಟಗಳು ಬೇಸರವೆನಿಸುತ್ತದೆ. ಸನಾತನ ಧರ್ಮವನ್ನು ಗಟ್ಟಿ ಮಾಡುವಂತಹ ಯುದ್ಧದ ವಾರ್ತೆಗಳು ಆತ್ಮಾನಂದದ ಕಡೆಗೆ ಕೊಂಡೊಯ್ಯುತ್ತದೆ. ಪ್ರಭು ಶ್ರೀರಾಮನ ಜನ್ಮಸ್ಥಳದ ಚ್ಯುತಿಗೆ ಇದ್ದ ಸವಾಲುಗಳು ಇಂದು ನಮ್ಮ ಜೀವನಕ್ಕೆ ಸ್ಫೂರ್ತಿ ಹಾಗೂ ವಿಶ್ವಕ್ಕೆ ರಾಮನ ಮೌಲ್ಯಗಳನ್ನು ಸಾರಿ ಹೇಳುತ್ತವೆ. ಹೀಗೆ ಅಯೋಧ್ಯೆಯ ಹೋರಾಟದ ತುಣುಕುಗಳು ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಕರ್ನಾಟಕ ಪ್ರಾಂತದ ಸಹಸೇವಾ...