ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಸುಳ್ಯ ಶಾಖೆಯಲ್ಲಿ ಉಚಿತ FDA/SDA/PDO ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ –ಕಹಳೆ ನ್ಯೂಸ್
ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಸುಳ್ಯ ಶಾಖೆಯಲ್ಲಿ ಆದಿತ್ಯವಾರದಂದು ಉಚಿತ FDA/SDA/PDO ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಪೂರಕವಾದ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕೆ.ಡಿ ಸಿಂಧೆ ವಿಜಯಪುರ ಇವರು ಭಾಗವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಪರೀಕ್ಷಾ ಪರಿವಿಡಿ, ಯಾವ ರೀತಿ ತಯಾರು ಮಾಡಬೇಕು ಮತ್ತು ಅಣುಕು ಪರೀಕ್ಷೆಗಳನ್ನು ನಡೆಸಿದರು. ಈ ತರಬೇತಿ ಕಾರ್ಯಾಗಾರದಲ್ಲಿ ಪುತ್ತೂರು,ಸುಳ್ಯ,ಮಡಿಕೇರಿ, ಕಾಸರಗೋಡು ಮತ್ತು ಕಡಬ ತಾಲೂಕುಗಳ 53...