ವಿಶ್ವ ಟೇಕ್ವಾಂಡೋ ಚಾಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥನಿ ಸಂಹಿತಾ ಅಲೆವೂರಾಯ ; ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಿಂದ ಅಭಿನಂದನೆ – ಕಹಳೆ ನ್ಯೂಸ್
ಮಂಗಳೂರು, ಆ 16 : ವಿಶ್ವ ಟೇಕ್ವಾಂಡೋ ಚಾಪಿಯನ್ ಶಿಪ್ ನಲ್ಲಿ ಮಹಿಳೆಯರ (ಕಿರಿಯ) ವಿಭಾಗದಲ್ಲಿ ಬೆಳ್ಳಿ ಗೆದ್ದ ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥನಿ ಸಂಹಿತಾ ಅಲೆವೂರಾಯ ಅವರನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ. ಸಂಹಿತಾ ಹೆತ್ತವರಾದ ಕದ್ರಿಯ ವಾಸುದೇವ ಭಟ್ ಕುಂಜತ್ತೋಡಿ ಅವರಿಗೆ ಕರೆ ಮಾಡಿದ ಶಿಕ್ಷಣ ಸಚಿವರು, ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಕ್ರೀಡೆಯ ಕುರಿತು ಮಕ್ಕಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ...