ಸಂತಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನದ ಪ್ರಸಾರಕ್ಕಾಗಿ ಸರಣಿ ವೆಬಿನಾರ್ ಕಾರ್ಯಕ್ರಮ – ಕಹಳೆ ನ್ಯೂಸ್
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗವು ವಿಜ್ಞಾನದ ಪ್ರಸಾರಕ್ಕಾಗಿ ಸರಣಿ ವಿಜ್ಞಾನ ವೆಬಿನಾರ್ ಕಾರ್ಯಕ್ರಮವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿತು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ|ಕೆ.ವಿ.ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ “ಪ್ರಸ್ತುತ ಸಂದರ್ಭದಲ್ಲಿ ವೆಬಿನಾರ್ ಮೂಲಕ ವಿಜ್ಞಾನ ಸಂವಹನವನ್ನು ಮಾಡುವ ಅಗತ್ಯವಿದೆ ಮತ್ತು ಇಂಥ ಕಾರ್ಯಕ್ರಮಗಳು ವಿಜ್ಞಾನದ ಕುರಿತು ಆಸಕ್ತಿ ಮೂಡಿಸುತ್ತವೆ” ಎಂದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕುರಿತು ವಿವರಗಳನ್ನು...