ಪುತ್ತೂರು ಪ್ರಗತಿ ಸ್ಟಡಿಸೆಂಟರ್ ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 12 ಆದಿತ್ಯವಾರದಿಂದ ಆನ್‍ಲೈನ್ ಶಿಕ್ಷಣ ಆರಂಭ-ಕಹಳೆ ನ್ಯೂಸ್
covid-19ರ ಆತಂಕದ ನಡುವಿನಲ್ಲಿಯೇ ಶಿಕ್ಷಣದ ಮಹತ್ವದ ಘಟ್ಟವಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯು ಉತ್ತಮ ರೀತಿಯಲ್ಲಿ ನೆರವೇರಿದೆ. ಮುಂದಿನ ವ್ಯಾಸಂಗಕ್ಕೆ ಅತ್ಯಮೂಲ್ಯ ಸಮಯವನ್ನು ವ್ಯರ್ಥಗೊಳಿಸದಂತೆ ತಡೆಗಟ್ಟುವುದು ಮುಂದಿನ ಮಹತ್ವದ ಹೆಜ್ಜೆಯಾಗಿದೆ. ಆದ್ದರಿಂದ ಎಸ್.ಎಸ್.ಎಲ್.ಸಿ ಮುಗಿಸಿ, ಪ್ರಥಮ ಪಿಯುಸಿಗೆ ಪಾದಾರ್ಪಣೆಗೊಳ್ಳಲಿರುವ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಮೂಲಕ ಶಿಕ್ಷಣವನ್ನು ಜುಲೈ 12 ಆದಿತ್ಯವಾರದಿಂದ ಪ್ರಾರಂಭಿಸುವುದಾಗಿ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ) ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್ ಶಿಕ್ಷಣ ಸಂಸ್ಥೆಯು ನಿರ್ಧರಿಸಿದೆ. 2020-21ನೇ ಶೈಕ್ಷಣಿಕ ವರ್ಷದ...