ರಾಜ್ಯದಲ್ಲಿ ಆಯುರ್ವೇದ ಔಷಧಿ ಮೊದಲ ಕ್ಲಿನಿಕಲ್ ಟ್ರಯಲ್ ಯಶಸ್ವಿ, 2ನೇ ಹಂತಕ್ಕೆ ಪ್ರಸ್ತಾವನೆ-ಕಹಳೆ ನ್ಯೂಸ್
ಬೆಂಗಳೂರು,ಜೂ.23- ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವ ರಾಜ್ಯದ ಮೊದಲ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‍ಗೆ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವ ಪ್ರಯೋಗಕ್ಕೆ ಡಾ. ಗಿರಿಧರ್ ಕಜೆ ಅವರು ಏಪ್ರಿಲ್‍ನಲ್ಲಿ ಸರ್ಕಾರಕ್ಕೆ ಅನುಮತಿ ಕೋರಿದ್ದರು. ಅಗತ್ಯ ದಾಖಲೆಗಳನ್ನು ಒದಗಿಸಿ ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದ ಬಗ್ಗೆ ವಿವರಿಸಿದ ಅವರು, ಅದು...