ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂಗೆ ಸೇರಿಸಲು ಆಗ್ರಹ ; ಫೆ.12ರಂದು ದೇಶಾದ್ಯಂತ ಮೌನ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ – ಕಹಳೆ ನ್ಯೂಸ್
ಬೆಂಗಳೂರು: ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂ (ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ)ಕ್ಕೆ ಸೇರಿಸುವಂತೆ ಭಾರತೀಯ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಪದವೀಧರರ ಸಂಘ ಒತ್ತಾಯಿಸಿದೆ. ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿದ್ಯಾಸಂಸ್ಥೆಗಳನ್ನು ಸಿಸಿಐಎಂಗೆ ಸೇರಿಸುವಂತೆ ನೀತಿ ಆಯೋಗದ ಪ್ರಸ್ತಾವವಿದ್ದರೂ, ಒಂದೆಡೆ ಸಿಸಿಐಎಂ ಮೂಲಕ ಎನ್‌ಸಿಐಎಸ್‌ಎಂಗೆ ಸೇರ್ಪಡೆಗೊಳ್ಳದೇ, ಇನ್ನೊಂದೆಡೆ ಆಯುಷ್ ಸಚಿವಾಲಯದ ಪ್ರಸ್ತಾವನೆಯಂತೆ ಪ್ರತ್ಯೇಕ ಆಯೋಗ ರಚಿಸಬೇಕು ಎಂಬ ನಿಲುವಿಗೂ ಬಾರದೇ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿದ್ಯಾಸಂಸ್ಥೆಗಳು...