ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊ0ಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್ ನ್ನು ಉದ್ಘಾಟಿಸಿದ ಡಾ.ದೀಪಿಕಾ ಶೆಟ್ಟಿ – ಕಹಳೆ ನ್ಯೂಸ್
ಮೂಡುಬಿದಿರೆ: ಸೌಂದರ್ಯವರ್ಧಕ ಚಿಕಿತ್ಸಾಲಯಗಳು ಈ ಕಾಲದ ಪ್ರತಿಯೊಬ್ಬರ ಕನಿಷ್ಠ ಅಗತ್ಯೆಯೆ ಹೊರತು ಐಷಾರಾಮಿ ಜೀವನ ಪದ್ದತಿಯಲ್ಲ ಎಂದು ಮುಂಬೈಯ ಡೆರ್ಮಟೊ ಕಾಸ್ಮಟಾಲಜಿಸ್ಟ್ ಡಾ.ದೀಪಿಕಾ ಶೆಟ್ಟಿ ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊAಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಪ್ರತಿಯೊಬ್ಬರು ತಮ್ಮ ತ್ವಚೆಗೆ ಹಾಗೂ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಇಂತಹ ವೈಯಕ್ತಿಕ ಯೋಗ ಕ್ಷೇಮದ ಸೇವೆಯನ್ನು...