” ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಬಹುದು ” ; ಮಕ್ಕಳಿಗೆ ಲಸಿಕೆ ಯಾವಾಗ..? ಆರೋಗ್ಯ ಸಚಿವಾಲಯದ ಸ್ಪಷ್ಟನೆ – ಕಹಳೆ ನ್ಯೂಸ್
ನವದೆಹಲಿ, ಜೂನ್ 26 :ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಬೇಕೆ, ಬೇಡವೇ? ಲಸಿಕೆ ನೀಡಿದರೆ ಅಡ್ಡ ಪರಿಣಾಮವಾಗುತ್ತದೆಯೇ? ಯಾವ ಲಸಿಕೆಯನ್ನು ಶಿಫಾರಸ್ಸು ಮಾಡಬಹುದು? ಗರ್ಭಿಣಿಯರಿಗೆ ಲಸಿಕೆ ನೀಡುವ ಸಂಬಂಧ ಹೀಗೆ ಹಲವು ಗೊಂದಲಗಳು ಹುಟ್ಟಿಕೊಂಡಿದ್ದವು. ಈ ಪ್ರಶ್ನೆಗಳಿಗೆ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ ಉತ್ತರ ನೀಡಿದೆ. ಗರ್ಭಿಣಿಯರಿಗೆ ಕೊರೊನಾ ಸೋಂಕಿಗೆ ನೀಡುವ ಲಸಿಕೆಗಳನ್ನು ನೀಡಬಹುದು. ಅವರ ಆರೋಗ್ಯದ ದೃಷ್ಟಿಯಿಂದ ಲಸಿಕೆ ನೀಡುವುದು ಅವಶ್ಯಕ ಕೂಡ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ. ಗರ್ಭಿಣಿಯರಿಗೆ...