Saturday, April 5, 2025

ರಾಜಕೀಯ

ರಾಜಕೀಯ

ಸಚಿವ ಹೆಚ್.ಸಿ. ಮಹದೇವಪ್ಪಗೆ ಐ.ಟಿ. ಶಾಕ್ – ಕಹಳೆ ನ್ಯೂಸ್

ಮೈಸೂರು: ವಿಧಾನಸಭೆ ಚುನಾವಣೆ ಹೊತ್ತಲ್ಲೇ ಸಚಿವ ಹೆಚ್.ಸಿ. ಮಹದೇವಪ್ಪ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರು ವಿಜಯನಗರದಲ್ಲಿರುವ ಮಹದೇವಪ್ಪ ಅವರ ನಿವಾಸದ ಮೇಲೆ ಬೆಳಿಗ್ಗೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಮಹದೇವಪ್ಪ ಮನೆಯಲ್ಲಿಯೇ ಇದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ ಸಚಿವರಾಗಿರುವ ಮಹದೇವಪ್ಪ ಅವರ ನಿವಾಸದ ಮೇಲೆ ಚುನಾವಣೆ ವೇಳೆಯಲ್ಲೇ ದಾಳಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ....
ರಾಜಕೀಯ

ಬಿ.ಜೆ.ಪಿ. ಅಭ್ಯರ್ಥಿ ಕಾರಿಗೆ ದುಷ್ಕರ್ಮಿಗಳಿಂದ ಬೆಂಕಿ – ಕಹಳೆ ನ್ಯೂಸ್

ಕೋಲಾರ: ವಿಧಾನಸಭೆ ಚುನಾವಣೆ ಕಾವು ಏರತೊಡಗಿರುವಂತೆಯೇ ಕೋಲಾರದಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ. ತಡರಾತ್ರಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದು ಬಿ.ಜೆ.ಪಿ. ಅಭ್ಯರ್ಥಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕೋಲಾರದ ಕಠಾರಿಪಾಳ್ಯದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಓಂಶಕ್ತಿ ಚಲಪತಿ ಅವರ ಮನೆ ಮುಂದೆ ನಿಲ್ಲಿಸಲಾಗಿದ್ದ ಇನ್ನೋವಾ ಮತ್ತು ಮಾರುತಿ 800 ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಕೋಲಾರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ....
ರಾಜಕೀಯ

ಕರಾವಳಿಗೆ ಬರಲಿದ್ದಾರೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ – ಕಹಳೆ ನ್ಯೂಸ್

ಮಂಗಳೂರು: ಕಾಂಗ್ರೆಸ್ ಪಾಲಿನ ಸ್ಟಾರ್ ಪ್ರಚಾರಕಿ, ಇಂದಿರಾ ಗಾಂಧಿಯ ಪಡಿಯಚ್ಚು ಅಂತಲೇ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಗಾಂಧಿ ಕರಾವಳಿಗೆ ಪ್ರ್ರಚಾರಕ್ಕೆ ಬರುವುದು ಖಚಿತವಾಗಿದೆ. ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾರನ್ನು ಅಂತಿಮ ಹಂತದಲ್ಲಿ ಪ್ರಚಾರ ಕಣಕ್ಕಿಳಿಸುವುದು ಖಚಿತವಾಗಿದ್ದು, ಇದೇ ವೇಳೆ ಕರಾವಳಿ ಭಾಗಕ್ಕೂ ಭೇಟಿ ನೀಡಲಿದ್ದಾರೆ. ಮೇ 1ರಿಂದ ಪ್ರಧಾನಿ ನರೇಂದ್ರ ಮೋದಿಯೂ ಪ್ರಚಾರಕ್ಕೆ ಬರಲಿದ್ದು ಈಗಾಗಲೇ ಪ್ರವಾಸ ದಿನಾಂಕ ನಿಗದಿಯಾಗಿದೆ. ಬಿಜೆಪಿ ಕೊನೆ ಕ್ಷಣದಲ್ಲಿ ಪ್ರಧಾನಿ ಮೋದಿಯನ್ನು ಪ್ರಚಾರ ಕಣಕ್ಕಿಳಿಸುವ ಮಾದರಿಯಲ್ಲೇ...
ರಾಜಕೀಯ

ಮೋಹಿದ್ಧೀನ್ ಬಾವರನ್ನು ಸುತ್ತುವರಿದು ಮೋದಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು – ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಉತ್ತರ ( ಸುರತ್ಕಲ್) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹಿದ್ಧೀನ್ ಬಾವ ಅವರು ಸೋಮವಾರ ಬೆಳಿಗ್ಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡಲು ಸಿದ್ದಗೊಳ್ಳುತ್ತಿದ್ದ ಸಂದರ್ಭ ಸ್ಥಳದಲ್ಲಿದ್ದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮಾತ್ ಅವರ ಬೆಂಬಲಿಗರು ( ಬಿಜೆಪಿ ಕಾರ್ಯಾಕರ್ತರು) ಮೋದಿ ಮೋದಿ ಎಂದು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಬಾವ ಅವರು ತಮ್ಮ ಬೆಂಬಲಿಗರೊಂದಿಗೆ...
ರಾಜಕೀಯ

ಮೇ 1ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ – ಕಹಳೆ ನ್ಯೂಸ್

ಉಡುಪಿ, ಏ 23:  ಮೇ 1ರಂದು ಉಡುಪಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು  ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.  ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಮೇ 1ರಂದು ಮೋದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಆದಿ ಉಡುಪಿ ಹೆಲಿಪ್ಯಾಡ್‌ ಮೂಲಕ ಉಡುಪಿಗೆ ಆಗಮಿಸಲಿದ್ದಾರೆ. ಬಳಿಕ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ, ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ...
ರಾಜಕೀಯ

ಬೆಳ್ತಂಗಡಿಯಲ್ಲಿ ಕೇಸರಿ ಯುಗ ಆರಂಭ ; ಹರೀಶ್ ಪೂಂಜಾ ನಾಮಪತ್ರ ಸಲ್ಲಿಕೆಗೆ ಕಿಕ್ಕಿರಿದು ಸೇರಿದ ಜನಸ್ತೋಮ – ಕಹಳೆ ನ್ಯೂಸ್

ಬೆಳ್ತಂಗಡಿ : ಭಾರತೀಯ ಜನತಾ ಪಕ್ಷದ ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿ ಹರೀಶ್ ಪೂಂಜಾ ನಾಮಪತ್ರ ಸಲ್ಲಿಕೆ ವೇಳಿ ಭಾರಿ ಜನಸ್ತೋಮ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಹಿರಿಯ ನಾಯಕರು ಹರೀಶ್ ಪೂಂಜಾರಿಗೆ ಸಾಥ್ ನೀಡಿದ್ದಾರೆ....
ರಾಜಕೀಯ

ಮಠಂದೂರು ಗೆಲುವಿಗೆ ಬಿಜೆಪಿ ರಣಕಹಳೆ ; ಫಯರ್ ಬ್ರ್ಯಾಂಡ್ ಭಾಷಣಕಾರ ತೇಜಸ್ವಿ ಸೂರ್ಯ ಇಂದು ಪುತ್ತೂರಿಗೆ – ಕಹಳೆ ನ್ಯೂಸ್

ಪುತ್ತೂರು : ತೀವ್ರ ವಿರೋಧದ ನಡುವೆ ಸವಾಲಾಗಿ ಸ್ವೀಕರಿಸಿದ ಬಿ.ಜೆ.ಪಿ. ಸಂಜೀವ ಮಠಂದೂರು ಅವರನ್ನು ಗೆಲ್ಲಿಸಿಯೇ ಸಿದ್ಧ ಎಂದು ಪಣ ತೊಟ್ಟಿದೆ. ಇಂದು ಸಂಜೀವ ಮಠಂದೂರು ನಾಮಪತ್ರ ಸಲ್ಲಿಸಲಿದ್ದು ಮುಖ್ಯ ಭಾಷಣಕಾರರಾಗಿ ಯುವಮೋರ್ಛಾದ ಪ್ರಧಾನ ಕಾರ್ಯದರ್ಶಿ ಫಯರ್ ಬ್ರ್ಯಾಂಡ್ ಭಾಷಣಕಾರ ತೇಜಸ್ವಿ ಸೂರ್ಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಇಂದು ಬೆಳಗ್ಗೆ 11:20 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ . ಇದರ ನಿಮಿತ್ತ...
ರಾಜಕೀಯ

ದುರಂಹಕಾರಿ ರಾಜಕೀಯ ಪಕ್ಷಗಳ ವಿರುದ್ದ ನನ್ನ ಹೋರಾಟ – ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು

ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುವ ಆರ್. ಶ್ರೀಕರ ಪ್ರಭು, ಅವರ ಚುನಾವಣಾ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.  ಕದ್ರಿಯಲ್ಲಿರುವ ಅವರ ಕಚೇರಿ ಮುಂಬಾಗದಲ್ಲಿ ಏ .22 ಭಾನುವಾರ ಬ್ಯಾಂಕ್ ಅಧಿಕಾರಿ ಸುರೇಶ್ ಶೆಟ್ಟಿ ಹಾಗೂ ಮಾಜಿ ಸಂಘ ಪ್ರಚಾರಕ ರಾಮ್ ಮೋಹನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀಕರ ಪ್ರಭು, ನನಗೆ ಮತದಾರರ ಮನಸ್ಸಿನ ಬಗ್ಗೆ ಅರಿವಿದ್ದು, ಈ ಚುನಾವಣೆ ಗೆಲ್ಲುವ ಕಾರ್ಯತಂತ್ರ...
1 219 220 221 222 223 227
Page 221 of 227
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ