“ಮಾಡಿ ಮಾಡಿ ಮತದಾನ’ ಅಂದ್ರು ಭಟ್ರು: ಬೊಂಬಾಟ್ ಸಾಂಗ್ ವೀಕ್ಷಿಸಿ
ರಾಜ್ಯದಲ್ಲೇ ಮೊದಲ ಬಾರಿಗೆ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಯೋಗರಾಜ್ ಭಟ್ ನೇತೃತ್ವದಲ್ಲಿ ಸಿದ್ಧವಾಗಿರೋ ರಾಜ್ಯ ವಿಧಾನಸಭಾ ಚುನಾವಣೆಯ ಧ್ಯೇಯ ಗೀತೆಯನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ವಿಕಾಸಸೌಧದಲ್ಲಿ ಬಿಡುಗಡೆ ಮಾಡಿದ್ದಾರೆ. ಗೀತೆಯನ್ನು ರಚಿಸಿ ನಿರ್ದೇಶಿಸಿರುವ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ನಮ್ಮ ತಂಡ ಮೀಡಿಯಾ ಕನೆಕ್ಟ್ ಸಹಯೋಗದಲ್ಲಿ ರಾಜ್ಯದ ನೈಜ ಸ್ಪೂರ್ತಿಯೊಂದಿಗೆ ಗೀತೆ ರೂಪುಗೊಂಡಿದೆ. ಪ್ರತಿಯೊಬ್ಬರೂ ಮತದಾನ ಏಕೆ ಮಾಡಬೇಕು ಎಂಬ ಸಂದೇಶವನ್ನು...