ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರಚಾರ ; ಹತ್ತಿರ ಬಾರದ ಜನತೆ – ಕಹಳೆ ನ್ಯೂಸ್
ಮೈಸೂರು: ನಾಲ್ಕು ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಕೈಗೊಂಡಿದ್ದಾರೆ. ಸೋಮವಾರ ಹಳ್ಳಿಗಳಿಗೆ ಭೇಟಿನೀಡಿದ ಸಮಯದಲ್ಲಿ ಜನರು ಅವರ ಹತ್ತಿರ ಹೆಚ್ಚಾಗಿ ಸುಳಿಯಲಿಲ್ಲ. ಬೆಳಿಗ್ಗೆ 10.30ಕ್ಕೆ ಕೆಲ್ಲಹಳ್ಳಿಗೆ ಭೇಟಿ ಕೊಟ್ಟಾಗ ಜನರು ಸೇರಿರಲಿಲ್ಲ. ಗ್ರಾಮದ ರಸ್ತೆಯಲ್ಲೇ ನಿಂತು ಪ್ರಚಾರ ಭಾಷಣ ಮಾಡಿದರು. ಮುಖ್ಯಮಂತ್ರಿಯ ಸುತ್ತ ಬೆರಳೆಣಿಕೆ ಜನರಷ್ಟೇ ಸೇರಿದ್ದು, ಅವರ ಮುಖದಲ್ಲಿ ಬೇಸರ ಮೂಡಿಸಿತು. ನಮ್ಮೂರಿಗೆ ಏನು ಮಾಡಿದ್ದೀರಿ?: ‘ಐದು ವರ್ಷ ಮುಖ್ಯಮಂತ್ರಿಯಾಗಿದ್ದೀರಿ. ನಮ್ಮೂರಿಗೆ ಏನು ಮಾಡಿದ್ದೀರಿ? ಇಲ್ಲಿನ ರಸ್ತೆ...