Sunday, January 19, 2025

ಕಡಬ

ಕಡಬ

ಕಡಬ : ಕೋಳಿ ಹಿಡಿಯಲು ಬಂದು ಬಾವಿಗೆ ಬಿದ್ದ ಚಿರತೆ- ಕಹಳೆ ನ್ಯೂಸ್

ಕಡಬ : ಕೋಳಿ ಹಿಡಿಯಲು ಬಂದು ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕೊಂಬಾರು ಕಮರ್ಕಜೆಯಲ್ಲಿ ನಡೆದಿದೆ. ಕೋಳಿ ಹಿಡಿಯಲು ಬಂದ ಚಿರತೆ ಆಕಸ್ಮಿಕವಾಗಿ ರಾಮಯ್ಯ ಎಂಬವರ ಬಾವಿಗೆ ಬಿದ್ದಿದ್ದು, ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆಯ ರಕ್ಷಣಾ ಕಾರ್ಯಕ್ಕೆ ತಯಾರಿ ನಡೆಸಿದ್ದಾರೆ....
ಕಡಬ

ರಾಜ್ಯದಲ್ಲಿ ಶೀಘ್ರವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ನಾಳೆ ಕಡಬದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಬೃಹತ್ ಜನಜಾಗೃತಿ ಸಮಾವೇಶ- ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡದ ನೇತೃತ್ವದಲ್ಲಿ ನಾಳೆ ಕಡಬದಲ್ಲಿ ರಾಜ್ಯದಲ್ಲಿ ಶೀಘ್ರವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಬೃಹತ್ ಜನಜಾಗೃತಿ ಸಭೆ ನಡೆಯಲಿದೆ.   ಸಂಜೆ 3:30 ಕ್ಕೆ ಸರಿಯಾಗಿ ಕಡಬ ವೃದ್ಧಿ ಹೋಟೆಲ್ ಮುಂಭಾಗದಿಂದ ಮೆರವಣಿಗೆಯ ಮೂಲಕ ಶ್ರೀ ದುರ್ಗಾಂಬಿಕಾ ದೇವಾಲಯದ ಅವರಣಕ್ಕೆ ಜಾಗೃತಿ ಜಾಥಾ ನಡೆಯಲಿರುವುದು. ನಂತರ 4:00 ಗಂಟೆಗೆ ಕಡಬ ಶ್ರೀ...
ಕಡಬ

ಕಡಬ ಬಲ್ಯದ ಗಾಣದಕೊಟ್ಟಿಗೆ ಎಂಬಲ್ಲಿ ಮಾಂಸಾಹಾರ ಸೇವಿಸಿ ಓರ್ವ ಸಾವು: ಐವರ ಆರೋಗ್ಯದಲ್ಲಿ ಏರುಪೇರು-ಕಹಳೆ ನ್ಯೂಸ್

ಕಡಬ: ಮಾಂಸಾಹಾರ ಸೇವಿಸಿ ಓರ್ವ ಮೃತಪಟ್ಟಿದ್ದು, ಹಲವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಡಬ ತಾಲೂಕಿನ ಬಲ್ಯದ ಗಾಣದಕೊಟ್ಟಿಗೆ ಎಂಬಲ್ಲಿ ನಡೆದಿದೆ. ಗಾಣದ ಕೊಟ್ಟಿಗೆ ನಿವಾಸಿ ದೇವಪ್ಪ ಗೌಡ ಮೃತ ವ್ಯಕ್ತಿ ಎನ್ನಲಾಗಿದೆ. ಅಲ್ಲಿ ಮಧ್ಯಾಹ್ನ ಊಟಕ್ಕೆ ಮಾಡಲಾಗಿದ್ದ ಕೋಳಿ ಪದಾರ್ಥ ಸೇವಿಸಿದ್ದಾರೆ. ಕೂಲಿ ಕೆಲಸ ಮಾಡಿ ಸಂಜೆ ಮನೆಗೆ ಬಂದ ಬಳಿಕ ದೇವಪ್ಪ ಗೌಡರಿಗೆ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ನೆಲ್ಯಾಡಿ ಆಸ್ಪತ್ರೆಗೆ...
ಕಡಬಸುಬ್ರಹ್ಮಣ್ಯ

ಗಾಂಧಿ ಜಯಂತಿ ಹಾಗೂ ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಸುಬ್ರಹ್ಮಣ್ಯ ಗ್ರಾ.ಪಂ ವಿಶೇಷ ಗ್ರಾಮ ಸಭೆ ಹಾಗೂ ಸ್ವಚ್ಚತಾ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ- ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಗಾಂಧಿ ಜಯಂತಿ ಹಾಗೂ ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ವಿಶೇಷ ಗ್ರಾಮ ಸಭೆ ಹಾಗೂ ಸ್ವಚ್ಚತಾ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‍ನಲ್ಲಿ ನಡೆಯಿತು. ಬಳಿಕ ಕಡಬ ತಾಲೂಕು ಸೋಕ್ ಪಿಟ್ ಅಭಿಯಾನಕ್ಕೆ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ,...
ಕಡಬ

ಕಡಬ: ರೇಬಿಸ್‍ಗೆ ಬಲಿಯಾದ ಕಾಲೇಜ್ ವಿದ್ಯಾರ್ಥಿನಿ – ಕಹಳೆ ನ್ಯೂಸ್

ಕಡಬ : ಕಾಲೇಜ್ ವಿದ್ಯಾರ್ಥಿನಿಯೊಬ್ಬಳು ರೇಬಿಸ್ ವೈರಸ್‍ಗೆ ತುತ್ತಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ನಡೆದಿದೆ. ಆಲಂಕಾರು ಗ್ರಾಮದ ಕೆದಿಲ ವರ್ಗಿಸ್ ಅವರ ಪುತ್ರಿ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿನ್ಸಿ ಸಾರಮ್ಮ (17) ಮೃತ ದುರ್ದೈವಿ. ಗುರುವಾರ ಬೆಳಿಗ್ಗೆ ವಿನ್ಸಿಗೆ ತಲೆ ನೋವು ಕಾಣಿಸಿಕೊಂಡಿತ್ತು. ನೋವು ಶಮನಕ್ಕಾಗಿ ಸ್ಥಳೀಯ ಆಸ್ಫತ್ರೆಯಿಂದ ಮದ್ದು ತರಲಾಗಿತ್ತು. ಸಂಜೆಯ ವೇಳೆಗೆ ರೋಗ ಮತ್ತಷ್ಟು ಉಲ್ಭಣಿಸಿತ್ತು....
ಕಡಬ

ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಜ್‌ನ ಕಾಮಪುರಾಣ; ಯುವತಿಗೆ ಗರ್ಭಧಾನ ಮಾಡಿ ಅಬಾರ್ಷನ್ ಮಾಡಿಸಿದ್ದ ಭೂಪ.. ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರಕರಣವನ್ನು ಬೆಳಕಿಗೆ ತಂದ ಕಹಳೆ ನ್ಯೂಸ್ ವರದಿಗಾರ- ಕಹಳೆ ನ್ಯೂಸ್

ಕಡಬ: ಕಳೆದ ಕೆಲ ದಿನಗಳ ಹಿಂದೆ ಅಪ್ರಾಪ್ತೆ ಯುವತಿಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಕಡಬ ಠಾಣೆಯ ಪೋಲಿಸ್ ಸಿಬ್ಬಂದಿ ಶಿವರಾಜ್ ವಿರುದ್ದ ಕೊನೆಗೂ ದೂರು ದಾಖಲಾಗಿದೆ. ನ್ಯಾಯಕ್ಕಾಗಿ ಕಡಬ ಠಾಣೆಗೆ ಕುಟುಂಬ ಕಲಹ, ಪತಿಯಿಂದ ಸಮಸ್ಯೆ ಹಾಗೂ ಹಲವಾರು ಸಮಸ್ಯೆಗಳಿಂದ ನ್ಯಾಯ ಅರಸುತ್ತಾ ಬರುವ ಮಹಿಳೆಯರೇ ಈ ಪೊಲೀಸ್ ಸಿಬ್ಬಂದಿ ಶಿವರಾಜ್‌ಗೆ ಟಾರ್ಗೆಟ್ ಎನ್ನಲಾಗಿದೆ. ಇನ್ನು ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಇದೇ ವ್ಯಾಪ್ತಿಯ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದು, ಅವಳು...
ಕಡಬ

ಕಡಬ: ಪೊಲೀಸ್ ಜೀಪು ಹಾಗೂ ಬೊಲೆರೋ ಮದ್ಯೆ ಡಿಕ್ಕಿ; ಅಪಾಯದಿಂದ ಪಾರಾದ ಚಾಲಕ- ಕಹಳೆ ನ್ಯೂಸ್

ಕಡಬ ಎಸ್.ಐ. ರುಕ್ಮ ನಾಯ್ಕ್ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಸೆ.4ರಂದು ಬೆಳಿಗ್ಗೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಪೊಲೀಸ್‌ ಜೀಪು ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ...
ಕಡಬ

ಮುಂಬಯಿಯಲ್ಲಿ ನೆಲೆಸಿದ್ದ ಕಡಬದ ಹಿರಿಯ ಪತ್ರಕರ್ತ ಜನಾರ್ಧನ ಪುರಿಯ ನಿಧನ- ಕಹಳೆ ನ್ಯೂಸ್

ಕಡಬ:ಜರ್ನಲಿಸ್ಟ್ ಯೂನಿಯನ್ ಕಡಬ ಘಟಕದ ಗೌರವ ಅಧ್ಯಕ ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿ, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿದ್ದ ಜನಾರ್ದನ ಇ0ದು ನಿಧನ ಹೊಂದಿದ್ದಾರೆ. ಇವರು ಮುಂಬಯಿಯಲ್ಲಿದ್ದು ಅಸೌಖ್ಯದಿಂದ ಕೆಲ ದಿನಗಳ ಹಿಂದೆ ಎರಡು ಬಾರಿ ಆಸ್ಪತ್ರೆ ಗೆ ದಾಖಲಾಗಿದ್ದರು. ರಾತ್ರಿ ಮುಂಬಾಯಿಯ ಅವರ ನಿವಾಸದಲ್ಲಿ ಅಸ್ವಸ್ಥ ಗೊಂಡು ಕೊನೆಯುಸಿರೆಳೆದಿದ್ದಾರೆ. ಇವರು ಪತ್ನಿ ಪ್ರೇಮ, ಪುತ್ರ ಪ್ರತೀಕ್,ಪುತ್ರಿ ಪ್ರಿಯಾಂಕ ಅವರನ್ನು ಅಗಲಿದ್ದಾರೆ. ಮುಂಬಯಿ ಯಲ್ಲಿ ಪ್ರಕಟಗೊಳ್ಳುತ್ತಿದ್ದ ಪರಿವರ್ತನಾ ಸುದ್ದಿ ಎಂಬ ಮಾಸ...
1 8 9 10 11 12 16
Page 10 of 16