Sunday, November 24, 2024

ಕಡಬ

ಕಡಬ

ಗುಂಡ್ಯ ಸಮೀಪ ಭೀಕರ ರಸ್ತೆ ಅಪಘಾತ; ಸವಾರರ ಪೈಕಿ ಓರ್ವ ಸ್ಥಳದಲ್ಲೇ ಮೃತ್ಯು; ಹಿಟ್ ಆಂಡ್ ರನ್ ನಡೆಸಿದ ಬಸ್ ನ್ನು ವಶಕ್ಕೆ ಪಡೆದ ಪೋಲೀಸರು

ವಾಹನ ಒಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಈಗ ತಾನೇ ಶಿರಾಡಿ ಗ್ರಾಮದ ಲಾವತಡ್ಕ ಎಂಬಲ್ಲಿ ನಡೆದಿದೆ. ಬೈಕ್ ಸವಾರರನ್ನು ಸಕಲೇಶಪುರದ ಆಲೂರು ತಾಲೂಕಿನ ಅರಿಯಳ್ಳಿ ಯ ಆಡ್ಯ ಗ್ರಾಮದ ಕೆಂಚಮ್ಮನ ಹೊಸಕೋಟೆ ನಿವಾಸಿ ಮೋಹನ್ ಮತ್ತು ಅರುಣ್ ಎಂದು ಗುರುತಿಸಲಾಗಿದೆ.ಇವರ ಪೈಕಿ ಅರುಣ್(33) ಸ್ಥಳದಲ್ಲೇ ಮೃತಾಪಟ್ಟಿದ್ದು ಈತ ಫರ್ನಿಚರ್ ಉದ್ಯೋಗ ನಡೆಸುತ್ತಿದ್ದು ಇನ್ನೊಬ್ಬ ಮೋಹನ್(37) ಎಂಬಾತ ಡ್ರೈವರ್ ಕೆಲಸ ನಡೆಸುತ್ತಿದ್ದು ತೀರಾ ಗಾಯಗೊಂಡ...
ಕಡಬದಕ್ಷಿಣ ಕನ್ನಡಸುದ್ದಿ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ಇದರ ವತಿಯಿಂದ ವೆನ್ಲಾಕ್ ಅಸ್ಪತ್ರೆ ಸಹಯೋಗದಲ್ಲಿ ಮರ್ದಾಳದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ಇದರ ವತಿಯಿಂದ ವೆನ್ಲಾಕ್ ಅಸ್ಪತ್ರೆ ಸಹಯೋಗದಲ್ಲಿ ಮರ್ದಾಳದಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮವನ್ನು ಮರ್ದಾಳ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀ ಹರೀಶ್ ಕೊಡಂದೂರು ನೇರವೇರಿಸಿದರು. ಮುಖ್ಯ ಅತಿಥಿಯಾಗಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹಕಾರ್ಯದರ್ಶಿಯವರಾದ ನವಿನ್ ನೆರಿಯ ಭಾಗವಹಿಸಿ "ಕೋವಿಡ್ ನಂತ ಸಂಕಷ್ಟಕಾಲದಲ್ಲೂ ಹಿಂದೂ ಸಂಘಟನೆಯ ಮಾತೃ ಹೃದಯದ ಕಾರ್ಯಕರ್ತರು ನಿಸ್ವಾರ್ಥ ಭಾವನೆಯಿಂದ ರಕ್ತದಾನದಂತ ಅಭಿನಂದನಾರ್ಹ ಕಾರ್ಯ ಮಾಡುತಿದ್ದಾರೆ ಎಂದರು....
ಕಡಬ

ಕಡಬ ಗೃಹರಕ್ಷಕ ದಳದ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾ ಕಮಾಂಡೆಂಟ್ ಡಾ|| ಮುರಳಿ ಮೋಹನ ಚೂಂತಾರು- ಕಹಳೆ ನ್ಯೂಸ್

ಕಡಬ : ಇಂದು ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಳಿ ಮೋಹನ ಚೂಂತಾರು ಕಡಬ ಗೃಹರಕ್ಷಕ ದಳದ ಘಟಕಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೊರೋನ 19 ಮಾರ್ಷಲ್ ಕರ್ತವ್ಯದ ಸಿಬ್ಬಂದಿಯವರ, ಪ್ರವಾಹ ರಕ್ಷಣಾ ಕರ್ತವ್ಯದ ಸಿಬ್ಬಂದಿಯವರ, ಹಾಗೂ ಘಟಕದ ಸಿಬ್ಬಂದಿಯವರ ಬಗ್ಗೆ ಯೋಗ ಕ್ಷೇಮ ವಿಚಾರಿಸಿ ಮಾತು ಕಥೆ ನಡೆಸಿದರು. ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಡಬದ ಸರಕಾರಿ ಹಿರಿಯ ಪ್ರಾಥಮಿಕ...
ಕಡಬ

ಕಡಬ : ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತ್ಯು-ಕಹಳೆ ನ್ಯೂಸ್

ಕಡಬ : ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬದಲ್ಲಿ ಸೋಮವಾರ ನಡೆದಿದೆ. ಮೃತ ಯುವಕನನ್ನು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಬಡಬೆಟ್ಟು ನಿವಾಸಿ ತಂಗಚ್ಚನ್ ಎಂಬವರ ಪುತ್ರ ಲಿಜು (35) ಎಂದು ಗುರುತಿಸಲಾಗಿದೆ. ಲಿಜು ಅವರು ಸೋಮವಾರ ಬೆಳಗ್ಗೆ ತನ್ನ ಮನೆಯ ಮುಂಭಾಗದಲ್ಲಿ ಕಬ್ಬಿಣದ ಸಲಾಕೆಯಿಂದ ತೆಂಗಿನಕಾಯಿ ತೆಗೆಯುತ್ತಿದ್ದ ವೇಳೆ ಸಲಾಕೆಯು ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಹರಿದು ಲಿಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌....
ಕಡಬಸುದ್ದಿ

ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯ; ಮೇ 6, 8ರಂದು ಕಡಬ-ಸುಬ್ರಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ- ಕಹಳೆ ನ್ಯೂಸ್

33ಕೆ.ವಿ ಕಡಬ-ಸುಬ್ರಮಣ್ಯ ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಮೇ 6ನೇ ಗುರುವಾರ ಹಾಗೂ 8ನೇ ಶನಿವಾರದಂದು ಬೆಳಗ್ಗೆ 9ರಿಂದ ಮದ್ಯಾಹ್ನ 2ಗಂಟೆಯವರೆಗೆ 33ಕೆ.ವಿ ಕಡಬ-ಸುಬ್ರಮಣ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಆದ್ದರಿಂದ 33/11ಕೆವಿ ಸುಬ್ರಮಣ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜು ಆಗುವ ಬಳಕೆದಾರರು ಗಮನಿಸಬೇಕಾಗಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಾಹಿತಿ ನೀಡಿದೆ....
ಕಡಬ

ಕಡಬ :ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸ್ ರಿಂದ ಧಾಳಿ.ಓರ್ವ ಬಂಧನ-ಕಹಳೆ ನ್ಯೂಸ್

ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗು ತಂಡದಿಂದ ಧಾಳಿ,‍ ಆರೋಪಿ ಇಲಿಯಾಸ್ ಎಂಬಾತನನ್ನು ಬಂಧನ. ಕೊಯಿಲ ಗ್ರಾಮದ ಬಡ್ಡಮ್ಮೆ ಎಂಬಲ್ಲಿ ಮರಿಯಮ್ಮ ಎಂಬವರ ಮನೆಯ ಹಿಂಬದಿಯಲ್ಲಿ ಮನೆಯ ಅಂಗಳದಲ್ಲಿ ಉಸ್ಮಾನ್ ಎಂಬವರ ಮಗ ಇಲಿಯಾಸ್ ಎಂಬ ವ್ಯಕ್ತಿ ಅಕ್ರಮವಾಗಿ ದನದ ಹಾಗು ದನದ ಕರುವನ್ನು ಕೊಂದು ಮಾಂಸ ಮಾಡುತ್ತಿರುವ ಖಚಿತ ಮಾಹಿತಿ ತಿಳಿದ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗು ಸಿಬಂಧಿಗಳು ಇಂದು ಬೆಳಿಗ್ಗೆ ಕಾರ್ಯಾಚರಣೆ ಮಾಡಿದ ಸಂದರ್ಭದಲ್ಲಿ...
ಕಡಬ

ಕಡಬ : ಸ್ನಾನಕ್ಕೆಂದು ನದಿಗೆ ಇಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತ್ಯು-ಕಹಳೆ ನ್ಯೂಸ್

ಕಡಬ : ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ. ಮೃತ ಯುವಕರನ್ನು ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ 20ವರ್ಷದ ಉಮ್ಮರ್ ಎಂಬವರ ಪುತ್ರ ಝಾಕಿರ್ ಹಾಗೂ ಸಹೋದರಿಯ ಪುತ್ರ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ನಿವಾಸಿ ಸಿನಾನ್ ಎಂದು ಗುರುತಿಸಲಾಗಿದೆ. ಮೃತ ಯುವಕರು ಸ್ನಾನಕ್ಕೆಂದು ಇಚಿಲಂಪಾಡಿ ಸೇತುವೆ ಸಮೀಪ ನದಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಸ್ಥಳೀಯರು ನೀರಿಗಿಳಿದು ಇಬ್ಬರ...
ಕಡಬ

ಕಡಬದಲ್ಲಿ ಶುಭಾರಂಭಗೊಳ್ಳಲಿದೆ ಶ್ರೀ ಸಿದ್ಧಿ ಟೆಕ್ಸ್ ಟೈಲ್ಸ್ & ರೆಡಿಮೆಡ್- ಕಹಳೆ ನ್ಯೂಸ್

ಕಡಬ : ಶ್ರೀ ಸಿದ್ಧಿ ಟೆಕ್ಸ್ ಟೈಲ್ಸ್ & ರೆಡಿಮೆಡ್ ಮಳಿಗೆ ಏಪ್ರಿಲ್ 22 ರಂದು ಬೆಳಗ್ಗೆ 10:00 ಗಂಟೆಗೆ ಶುಭಾರಂಭಗೊಳ್ಳಲಿದೆ. ಪಂಜ ರಸ್ತೆಯ ಯೋಗ ಕ್ಷೇಮ ಕಾಂಪ್ಲೆಕ್ಸ್‍ನಲ್ಲಿ ಮಳಿಗೆ ಶುಭಾರಂಭಗೊಳ್ಳಲಿದೆ. ಮಳಿಗೆಯನ್ನ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಕಡಬ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಜೇಶ್ವರಿ ಕನ್ಯಾಮಂಗಲ, ಪಿ.ಪಿ ವರ್ಗೀಸ್ ಜಿಲ್ಲಾ ಪಂಚಾಯತ್ ಸದಸ್ಯರು, ಕೃಷ್ಣ ಶೆಟ್ಟಿ...
1 5 6 7 8 9 11
Page 7 of 11