ಕಾರು-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ : ಪವಾಡಸದೃಶವಾಗಿ ಪಾರಾದ ಕಾರಿನಲ್ಲಿದ್ದ ಪ್ರಯಾಣಿಕರು- ಕಹಳೆ ನ್ಯೂಸ್
ಕಡಬ: ಇನ್ನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಪಂಜ-ಕಡಬ ರಸ್ತೆಯ ಕೋಡಿಂಬಾಳದಲ್ಲಿ ನಡೆದಿದೆ. ಧರ್ಮಸ್ಥಳ ಕಾಯರಡ್ಕದ ಮೂಲದ ಮೂವರು ಪಂಜ ಕಡೆ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಬೆಂಗಳೂರಿನಿಂದ ಪಂಜ ಮಾರ್ಗವಾಗಿ ಕಡಬಕ್ಕೆ ಬರುತ್ತಿದ್ದ ಸುಗಮ ಸಂಸ್ಥೆಗೆ ಸೇರಿದ ಖಾಸಗಿ ಬಸ್ ನಡುವೆ ಕೋಡಿಂಬಾಳ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿದ್ದ ಮೂವರು ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ...