Tuesday, December 3, 2024

ಕಾಪು

ಉಡುಪಿಕಾಪುಸುದ್ದಿ

ಕರಾವಳಿಗೆ ಶೀಘ್ರ ಶುಭ ಸುದ್ದಿ”- ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ-ಕಹಳೆ ನ್ಯೂಸ್

ಕಾಪು: ಕರಾವಳಿ ಭಾಗ ನಮ್ಮ ಹೃದಯವಿದ್ದಂತೆ. ಇಲ್ಲಿನ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿ ಉನ್ನತೀಕರಣಗೊಳಿಸುವುದು ಇಲಾಖೆಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಅವರು ಇಂದು ಕಾಪುವಿಗೆ ಭೇಟಿ ನೀಡಿದ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದರು. ರೈಲ್ವೆ ರಾಜ್ಯ ಖಾತೆಯ ಸ್ವತಂತ್ರ ಸಚಿವನಾಗಿ ಎರಡು ವಾರಗಳ ಹಿಂದೆ ಮಂಗಳೂರಿಗೆ ಬಂದು ಸಂಸದರಾದ ಬ್ರಿಜೇಶ್ ಚೌಟ,...
ಉಡುಪಿಕಾಪುಸುದ್ದಿ

ಕಾಪು ತಾಲ್ಲೂಕು ಮಟ್ಟದ 78ನೇ ಸ್ವಾತಂತ್ರ‍್ಯ ದಿನಾಚರಣೆ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ-ಕಹಳೆ ನ್ಯೂಸ್

ಕಾಪು ತಾಲ್ಲೂಕು ಉಡುಪಿ ಜಿಲ್ಲೆ ವತಿಯಿಂದ ನಡೆದ "ಕಾಪು ತಾಲ್ಲೂಕು ಮಟ್ಟದ 78 ನೇ ಸ್ವಾತಂತ್ರೋತ್ಸವ" ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಕಾಪು ತಹಶೀಲ್ದಾರರಾದ ಪ್ರತೀಭಾ ಆರ್ ಅವರು ಧ್ವಜಾರೋಹಣ ನೆರವೇರಿಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್, ಕಾಪು ವೃತ್ತ ನಿರೀಕ್ಷಕರಾದ...
ಕಾಪುಸುದ್ದಿ

ಕಟಪಾಡಿ ಎಸ್‌ವಿಎಸ್ ಪ.ಪೂ. ಕಾಲೇಜು ಸಭಾಭವನದಲ್ಲಿ ಬಂಟರ ಸಂಘ ಕಟಪಾಡಿ, ಬಂಟರ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ – ಕಹಳೆ ನ್ಯೂಸ್

ಕೃಷಿಕನ ಬದುಕು ನೆಮ್ಮದಿಯಿಂದ ಕೂಡಿದ ಬದುಕು ಬಂಟರು ವೃತ್ತಿ-ಪ್ರವೃತ್ತಿಯನ್ನು ಹುಡುಕುತ್ತಾ ಪ್ರಾದೇಶಿಕ ನೆಲೆಯಿಂದ ಪ್ರಾಪಂಚಿಕವಾಗಿ ನೆಲೆಯನ್ನು ಕಂಡು ಕೊಂಡರು ತುಳುನಾಡಿನ ಆಚಾರ ವಿಚಾರ ಮರೆಯದೆ ಶ್ರೀಮಂತಿಕೆಗಿಂತ ನೆಮ್ಮದಿಯ ಬದುಕು ಕಂಡ ಪೂರ್ವಜರ ಪ್ರಕೃತಿ ಆಧಾರಿತ ಆಹಾರ ಪದ್ದತಿ, ಸಂಸ್ಕಾರವನ್ನು ಮಾತ್ರ ಮರೆಯದಿರಿ ಎಂದು ಕಾಫು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಕಟಪಾಡಿ ಎಸ್‌ವಿಎಸ್ ಪ.ಪೂ. ಕಾಲೇಜು ಸಭಾಭವನದಲ್ಲಿ ಬಂಟರ ಸಂಘ ಕಟಪಾಡಿ, ಬಂಟರ ಮಹಿಳಾ ವೇದಿಕೆ...
ಕಾಪುಸುದ್ದಿ

ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ – ಕಹಳೆ ನ್ಯೂಸ್

ಕಾಪು : ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರಖಂಡಿಸಿ, ದುರಾಡಳಿತ ವಿರೋಧಿಸಿ ಎನ್.ಡಿ.ಎ ಕರ್ನಾಟಕ ವತಿಯಿಂದ ನಡೆಯುತ್ತಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು....
ಕಾಪು

ಕಟಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮ- ಕಹಳೆ ನ್ಯೂಸ್

ಇಂದು ಕಟಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸೀನಿಯರ್ ಹೆಲ್ತ್ ಆಫೀಸರ್ ಬಸವರಾಜ್, ಮೆಡಿಕಲ್ ಆಫೀಸರ್ ಶೈನಿ, ಪಂಚಾಯತಿ ಅದ್ಯಕ್ಷರು, ಸದಸ್ಯರು ಇದರಲ್ಲಿ ಭಾಗವಹಿಸಿದ್ದರು. ಸಾರ್ವಜನಿಕರು ತೆರೆದ ಪರಿಕರಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತದೆ‌. ಅದನ್ನು ನಿಯಂತ್ರಿಸಬೇಕು. ಸ್ವಚ್ಚತೆ ಕಾಪಾಡಬೇಕು ಎಂದು ಕತೆ ನೀಡಿದರು. ಲಯನ್ಸ್ ಕ್ಲಬ್ ವತಿಯಿಂದ ಕರಪತ್ರಗಳನ್ನು ಮಾಡಿಸಿ ಹಂಚಿ ಜಾಗೃತಿ ಉಂಟು ಮಾಡಲಾಯಿತು. ಅಲ್ಲಿ ಇದ್ದ ವಸ್ತುಗಳಲ್ಲಿ...
ಕಾಪುಸುದ್ದಿ

ಕಾಪು ತಾಲ್ಲೂಕಿನಲ್ಲಿ ಹಲವೆಡೆ ನೆರೆ : ಸ್ವತಃ ಫೀಲ್ಡಿಗಿಳಿದ ತಹಶಿಲ್ದಾರ್ ಪ್ರತಿಭಾ ಆರ್ – ಕಹಳೆ ನ್ಯೂಸ್

ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ನೆರೆ ಉಂಟಾಗಿ ಕಾಪು ತಾಲ್ಲೂಕಿನಲ್ಲಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ತಾವೇ ಸ್ವತಃ ಫೀಲ್ಡಿಗಳಿದು ನೆರೆ ಪ್ರದೇಶಕ್ಕೆ ಧಾವಿಸಿ ಬೋಟ್ ನ ಮೂಲಕ ನೆರೆಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಿಗಿದ ತಹಶಿಲ್ದಾರ್ ಪ್ರತಿಭಾ ಸಂತ್ರಸ್ತರ ಮನ ಒಲಿಸಿ, ಕರೆತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿಯೂ ಯಶಸ್ವಿಯಾದರು. ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭಟ್ಟಸಾಲಿನಲ್ಲಿ ಜಲಾವೃತಗೊಂಡಿದ್ದ ತುಕ್ರ ಮುಖಾರಿ ಅವರ ಮನೆಯ 9 ಮಂದಿ...
ಕಾಪುಸುದ್ದಿ

ಸೈಂಟ್ ಜೋನ್ಸ್ ಅಕಾಡಮಿ ಪ್ರೌಢಶಾಲೆ ಮತ್ತು ಉಸಿರಿಗಾಗಿ ಹಸಿರು ಸಂಘಟನೆ ಜಂಟಿಯಾಗಿ ಹಸಿರು ಅಭಿಯಾನ ಕಾರ್ಯಕ್ರಮ -ಕಹಳೆ ನ್ಯೂಸ್

ಸೈಂಟ್ ಜೋನ್ಸ್ ಅಕಾಡಮಿ ಪ್ರೌಢಶಾಲೆ ಮತ್ತು ಉಸಿರಿಗಾಗಿ ಹಸಿರು ಸಂಘಟನೆ ಜಂಟಿಯಾಗಿ ಹಸಿರು ಅಭಿಯಾನ ಕಾರ್ಯಕ್ರಮವನ್ನು ಸಂಘಟನೆ ಮಾಡಿತು. ಸಂಘಟಕರಾದ ಶ್ರೀ ಸಂತೋಷ್ ಎಂ ಶೆಟ್ಟಿಗಾರ್ ರವರು ಪರಿಸರ ಸಂರಕ್ಷಣೆ ಹಾಗೂ ಗಿಡಗಳನ್ನು ನೆಟ್ಟು ಬೆಳೆಸುವ ಮಹತ್ವದ ಬಗ್ಗೆ ತಿಳಿಸಿದರು. ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಯಲ್ಲಮ್ಮ ರವರು ಗಿಡಕ್ಕೆ ಮಣ್ಣು, ಗೊಬ್ಬರ ಮತ್ತು ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ತಮ್ಮ ಮಾತಿನಲ್ಲಿ ಸೋಲಿಗಾಸ್ ಜನರ ಬಗ್ಗೆ...
ಕಾಪುಸುದ್ದಿ

ಪಡುಬಿದ್ರಿ ನಡಿಪಟ್ನದಲ್ಲಿ ಕಡಲ್ಕೊರೆತ : ಇಲಾಖಾಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ಥಳಕ್ಕೆ ಭೇಟಿ ಪರಿಶೀಲನೆ- ಕಹಳೆ ನ್ಯೂಸ್

ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ನ ಭಾಗದಲ್ಲಿ ಕಡಲ್ಕೊರೆತ ಉಂಟಾಗಿದ್ದು,  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ದಿನಗಳಿಂದ ಸುರಿಯುತ್ತಿರುವ ಅತಿಯಾದ ಗಾಳಿ ಮಳೆಯಿಂದಾಗಿ ವಿಪರೀತ ಕಡಲ್ಕೊರೆತ ಉಂಟಾಗುತ್ತಿದ್ದು ತಕ್ಷಣಕ್ಕೆ ತಾತ್ಕಾಲಿಕ ಪರಿಹಾರ ಕಾಮಗಾರಿ ಕೈಗೊಳ್ಳಲು ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಸೂಚಿಸಿ ಕಡಲ್ಕೊರೆತದ ಶಾಶ್ವತ ಪರಿಹಾರಕ್ಕೆ ಅನುದಾನ ಮಂಜೂರು ಮಾಡುವಂತೆ ಮೀನುಗಾರಿಕಾ...
1 2 3 4 8
Page 2 of 8