ಅತ್ಯಾಚಾರ ಅನಾಚಾರದ ವಿರುದ್ಧ ಹೋರಾಟ – ಹಿಂದೂ ಮಾತ್ರ ಶಕ್ತಿಯ ಅನಾವರಣ : ಶೀಘ್ರದಲ್ಲಿ ಸಂತ್ರಸ್ತೆಯ ನ್ಯಾಯಕ್ಕಾಗಿ ನಮ್ಮ ನಡಿಗೆ “ನಾರಿ ಶಕ್ತಿಯ ಅನಾವರಣ” : ಸಾಮಾಜಿಕ ಕಾರ್ಯಕರ್ತೆ ರಮಿತಾ ಕಾರ್ಕಳ – ಕಹಳೆ ನ್ಯೂಸ್
ಕಾರ್ಕಳ ತಾಲೂಕಿನ ರಂಗನಪಲ್ಕೆ ಪರಿಸರದ ನಿರ್ಜನ ಪ್ರದೇಶದಲ್ಲಿ ಅಮಾನವೀಯ ಪೈಶಾಚಿಕ ಕೃತ್ಯಕ್ಕೆ ನಾವು ಬಲವಾಗಿ ಖಂಡಿಸುತ್ತೇವೆ. ಭೋವಿ ಸಮುದಾಯದ ಬಡ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಮತ್ತು ಬರಿಸುವ ಔಷಧಿಯನ್ನು ನೀಡಿ ಸಾಮೂಹಿಕ ಅತ್ಯಾಚಾರ ಮಾಡಿದ ಪೈಚಾಚಿಕ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಕಾರ್ಕಳ ಅವರು ತಿಳಿಸಿದ್ದಾರೆ. ಇದೊಂದು ಜೆಹಾದ್ ಕೃತ್ಯವಾಗಿದೆ ಕಾರ್ಕಳದಲ್ಲಿ ಮಾದಕವಸ್ತುಗಳ ಅಂದರೆ ಡ್ರಗ್ಸ್ ಜಾಲವು ವ್ಯಾಪಕವಾಗಿ ಹರಡಿಕೊಂಡಿದೆ ಹಾಗೂ ಅವರ ಟಾರ್ಗೆಟ್...