ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಜು.28 ರಂದು ಗ್ರಾಮೀಣ ಕ್ರೀಡಾಕೂಟ : ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಪತ್ರಿಕಾಗೋಷ್ಠಿ
ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಪ್ರತೀ ಬಾರಿಯೂ ಕೂಡಾ ಕರ್ಕಾಟಕ ಅಮಾವಾಸ್ಯೆಯ ದಿನ ಆಚರಣೆ ಮಾಡುವಂತಹ ಸಂಪ್ರದಾಯ ಇತ್ತೀಚಿನ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆ ಪ್ರಯುಕ್ತ ಆಗಸ್ಟ್ 4 ರಂದು ಆಟಿ ಅಮಾವಾಸ್ಯೆಯ ದಿನ, ಅಂದೇ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ. ಈ ಸಂಭ್ರಮವನ್ನು ಕೇವಲ ಕುಂದಾಪುರದಷ್ಟೇ ಅಲ್ಲದೇ ವಿಶ್ವದಾದ್ಯಂತ ಎಲ್ಲೆಲ್ಲ ಕುಂದಾಪ್ರ ಕನ್ನಡ ಭಾಷಿಕರು ವಾಸಿಯಾಗಿದ್ದಾರೆ ಅಲ್ಲಿ ಅದರ ಆಚರಣೆಯನ್ನು ಮಾಡಲಾಗುತ್ತಿದೆ. ನಾವು ಕಲಾಕ್ಷೇತ್ರ-ಕುಂದಾಪುರ ಸಂಸ್ಥೆ...