ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿರುವ ಸಕಲಕಲಾ ವಲ್ಲಭೆ “ವಿದುಷಿ ಮೈತ್ರಿ ಭಟ್ ಮವ್ವಾರು” – ಕಹಳೆ ನ್ಯೂಸ್
ಒಂದೇ ಕಲೆಯನ್ನು ಮೈಗೂಡಿಸಿಕೊಂಡು ಸಾಧನೆ ಮಾಡಿದವರು ಅದೆಷ್ಟೋ ಜನ. ಆದ್ರೆ ಬೇರೆ ಬೇರೆ ಕಲೆಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎನಿಸಿಕೊಂಡವರು ಕೆಲವೇ ಕೆಲವು ಜನ. ಅಂತವರಲ್ಲಿ ವಿದುಷಿ ಮೈತ್ರಿ ಭಟ್ ಮವ್ವಾರು ಕೂಡಾ ಒಬ್ಬರು. ಹೌದು..ಎಂಎಸ್‍ಸಿ ಕಂಪ್ಯೂಟರ್ ಸೈನ್ಸ್ ಪದವೀಧರೆಯಾಗಿರುವ ಮೈತ್ರಿ ಭಟ್ ಅವರಿಗೆ ಬಾಲ್ಯದಲ್ಲೇ ಭರತನಾಟ್ಯ, ಯಕ್ಷಗಾನ ಹಾಗೂ ನಾಟಕಗಳಲ್ಲಿ ಅಪಾರವಾದ ಆಸಕ್ತಿ. ಮೈತ್ರಿ ಭಟ್ ಕಾಸರಗೋಡಿನ ಮವ್ವಾರಿನವರಾಗಿದ್ದು, ಗಣಪತಿ ಭಟ್ ಚಂದ್ರಿಕಾ ಭಟ್ ದಂಪತಿಯ ಪುತ್ರಿ. ಸದ್ಯ...