ಭಟ್ಕಳ: ಹಿಂಸಾತ್ಮಕವಾಗಿ ಎರಡು ಕೋಣಗಳ ಸಾಗಾಟ: ಇಬ್ಬರು ಆರೋಪಿಗಳ ಬಂಧನ-ಕಹಳೆ ನ್ಯೂಸ್
ಭಟ್ಕಳ: ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಮಾನವೀಯವಾಗಿ ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ ಒಣಹುಲ್ಲುಗಳ ಅಡಿಯಲ್ಲಿ ಎರಡು ಕೋಣಗಳನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿರುವಾಗ ಪೊಲೀಸರು ಪತ್ತೆ ಹಚ್ಚಿ ವಾಹನ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಹಡೀಲ ಜೋಳದಮೂಲೆ ನಿವಾಸಿ ರಾಮ ಬಡ್ಕಾ ನಾಯ್ಕ (43) ಹಾಗೂ ಬೆಳಕೆ ಕಾನಮಡ್ಲು ನಿವಾಸಿ ರಾಮಚಂದ್ರ ಸುಬ್ಬ ನಾಯ್ಕ (42) ಅವರನ್ನು ಕೂಡಾ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು, ಅಂದಾಜು 50 ಸಾವಿರ ಮೌಲ್ಯದ ಎರಡು...