ಮಂಗಳೂರು:ನಾರಿಯರ ಮನಸೆಳೆದ ವೈವಿಧ್ಯಮಯ ಸೀರೆ ಪ್ರದರ್ಶನ-ಕಹಳೆ ನ್ಯೂಸ್
ಮಂಗಳೂರು: ಮಾರ್ಚ್ ತಿಂಗಳು ಬಂತೆಂದರೆ ಸಾಕು ಎಲ್ಲಾ ಕಡೆಗಳಲ್ಲೂ ಮಹಿಳಾ ದಿನಾಚರಣೆಯ ಸಂಭ್ರಮ ಮನೆ ಮಾಡಿರುತ್ತದೆ. ಮಹಿಳೆಯರಿಗೆ ಉಡುಪುಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ವಿಭಿನ್ನವಾದ ಹಾಗೂ ವೈವಿಧ್ಯಮಯ ಉಡುಗೆ-ತೊಡುಗೆ ತೊಟ್ಟು ಸಂಭ್ರಮಿಸುವುದನ್ನು ನೋಡುವುದೇ ಒಂದು ಹಬ್ಬ. ಅದರಲ್ಲೂ ಭಾರತೀಯ ಮಹಿಳೆಯ ಅತ್ಯಂತ ವಿಭಿನ್ನ ಹಾಗೂ ವಿಶಿಷ್ಟವಾದ ಉಡುಗೆಯ ಸಾಲಿನಲ್ಲಿ ಮೊದಲು ನಿಲ್ಲುವುದೇ ಸೀರೆ. ಸೀರೆ ಎಂದರೆ ಸಾಕು ಮಹಿಳಾಮಣಿಗಳಿಗೆ ಎಲ್ಲಿಲ್ಲದ ಸುಗ್ಗಿ, ಸಂತೋಷ. ಇದೇ ಕಾರಣಕ್ಕಾಗಿ ಇಲ್ಲಿ ದೇಶದ ವೈವಿಧ್ಯಮಯ...