Saturday, November 23, 2024

ಮಂಗಳೂರು

ದಕ್ಷಿಣ ಕನ್ನಡಬೆಂಗಳೂರುಮಂಗಳೂರುಸುದ್ದಿಹಾಸನ

ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತ ; ರೈಲು ಸಂಚಾರ ಸ್ಥಗಿತ – ಕಹಳೆ ನ್ಯೂಸ್

ಸಕಲೇಶಪುರ: ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ನಡೆದಿದ್ದು ಇದರಿಂದ ಹಾಸನ-ಮಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತವಾಗಿದೆ.   ಶುಕ್ರವಾರ (ಆಗಸ್ಟ್ 9) ಮಧ್ಯರಾತ್ರಿ ಈ ಘಟನೆ ನಡೆದಿದ್ದು ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಸಕಲೇಶಪುರ, ಯಡಕುಮಾರಿ, ಶಿರವಾಗಿಲು,...
ಮಂಗಳೂರುಸುದ್ದಿ

ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ : ಎಸ್‌ಇ‌ಝೆಡ್‌ನ ಬಹು ಕಾಲದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ..!- ಕಹಳೆ ನ್ಯೂಸ್

ಮಂಗಳೂರು ಆರ್ಥಿಕ ವಲಯ ( SEZ) ನಲ್ಲಿ ಜೆಬಿಎಫ್ ಪೆಟ್ರೊಕೆಮಿಕಲ್ಸ್ ಮತ್ತು ಗೇಲ್‌ನ ವಿಲೀನದಿಂದ ಎಸ್‌ಇ‌ಝೆಡ್‌ ನ ಜಾಗ ಕಳೆದುಕೊಂಡ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ವಿಷಯದ ಕುರಿತು ನಿರಂತರ ಬೆನ್ನಟ್ಟುತ್ತಿರುವ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. JBF...
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರಿನ ಶೆರ್ ಲಾಕ್ ಪಬ್‌ನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ ; ಪುತ್ತೂರಿನ ನಾಲ್ವರು ಅಂದರ್..!! – ಕಹಳೆ ನ‌್ಯೂಸ್

ಮಂಗಳೂರು, ಆ.06 : ಪಬ್‌ವೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32), ಪ್ರಿತೇಶ್ (33) ಬಂಧಿತರು. ಪಾಂಡೇಶ್ವರದ ಮಾಲ್‌ವೊಂದರಲ್ಲಿರುವ ಪಬ್‌ಗೆ ಜುಲೈ ೩ರಂದು ಮಹಿಳೆಯೊಬ್ಬರು ತನ್ನ ಗೆಳತಿಯೊಂದಿಗೆ ತೆರಳಿದ್ದರು. ಈ ವೇಳೆ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕರ ತಂಡ, ಮಹಿಳೆಗೆ ಕಿರುಕುಳ ನೀಡಿದ್ದಾರೆ. ಜೊತೆಗೆ ಮಹಿಳೆಯೊಂದಿಗೆ ಅಸಭ್ಯವಾಗಿ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗೆ ಬೆಂಕಿ-ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಧಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟ್ ವೊಂದು ಸೋಮವಾರ ಬೆಳಗಿನ ಜಾವ ಸಮುದ್ರ ಮಧ್ಯೆ ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ. ಹುಸೈನ್ ಎಂಬವರ ಮಾಲಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ. ಈ ವೇಳೆ ಬೋಟ್ ನಲ್ಲಿದ್ದ 10 ಮೀನುಗಾರರನ್ನು ಇನ್ನೊಂದು ಬೋಟ್ ನಲ್ಲಿದ್ದವರು ರಕ್ಷಿಸಿದ್ದಾರೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ‘‘ರವಿವಾರ ಬೆಳಗ್ಗೆ 10 ಮಂದಿ ಮೀನುಗಾರರೊಂದಿಗೆ ನಮ್ಮ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಸೋಮವಾರ ಬೆಳಗ್ಗಿನ ಹೊತ್ತು ಏಕಾಏಕಿ...
ಕ್ರೈಮ್ದಕ್ಷಿಣ ಕನ್ನಡಮಂಗಳೂರುರಾಜ್ಯಸುದ್ದಿ

ಮಂಗಳೂರು 40 ಮಂದಿ ವಿಚಾರಣಾಧೀನ ಕೈದಿಗಳು ಡ್ರಗ್ಸ್ ಸೇವಿಸಿರುವುದು ದೃಢ, 25 ಮೊಬೈಲ್‌ ವಶ : ಆಯುಕ್ತ ಅನುಪಮ್‌ ಅಗರ್‌ವಾಲ್‌ – ಕಹಳೆ ನ್ಯೂಸ್

ಮಂಗಳೂರು, ಆ 1 : ಜಿಲ್ಲಾ ಕಾರಾಗೃಹದ 40 ಮಂದಿ ವಿಚಾರಣಾಧೀನ ಕೈದಿಗಳು ಡ್ರಗ್ಸ್ ಸೇವನೆ ಮಾಡಿರುವುದು ಪರೀಕ್ಷೆ ವೇಳೆ ಗೊತ್ತಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ. ಇತ್ತೀಚೆಗೆ ಜೈಲಿಗೆ ದಾಳಿ ನಡೆಸಿದಾಗ 25 ಮೊಬೈಲ್‌, ಗಾಂಜಾ ಸ್ಯಾಚೆಟ್‌ಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿರುವ 389 ವಿಚಾರಣಾಧೀನ ಕೈದಿಗಳ ಪೈಕಿ 110 ಮಂದಿಯನ್ನು ಡ್ರಗ್ಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 40 ಮಂದಿಯಲ್ಲಿ ಪಾಸಿಟಿವ್‌ ಬಂದಿದೆ. ಉಳಿದವರನ್ನು ಕೂಡ ಪರೀಕ್ಷೆಗೆ...
ದಕ್ಷಿಣ ಕನ್ನಡಮಂಗಳೂರು

ಮಂಗಳೂರು :ಶ್ರೀ ಭುವನೇಂದ್ರ ಹಾಲ್‌ನಲ್ಲಿ ಕೆನರಾ ನಂದಗೋಕುಲ್ ಹುಲಿಯ ದಿನಾಚರಣೆ : ಹುಲಿವೇಷ ಧರಿಸಿ ಗಮನ ಸೆಳೆದ ಮಕ್ಕಳು -ಕಹಳೆ ನ್ಯೂಸ್

ಮಂಗಳೂರು : ಕೆನರಾ ನಂದಗೋಕುಲ್ ತಂಡವು ಶ್ರೀ ಭುವನೇಂದ್ರ ಸಭಾಭವನದಲ್ಲಿ ಹುಲಿಯ ದಿನವನ್ನು ವಿಜೃಂಭಣೆಯಿಂದ ಆಚರಿಸಿತು. ಮಕ್ಕಳು ಹುಲಿವೇಷ ಧರಿಸಿ ಎಲ್ಲರ ಗಮನ ಸೆಳೆದರು. ಕೆಲವು ಮಕ್ಕಳು ಹುಲಿಗಳ ಬಗ್ಗೆ ಭಾವನಾತ್ಮಕ ಭಾಷಣಗಳನ್ನು ನೀಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ "ಹುಲಿಗಳನ್ನು ರಕ್ಷಿಸಿ, ಪ್ರಕೃತಿಯನ್ನು ಉಳಿಸಿ" ಎಂಬ ಘೋಷಣೆ ಕೇಳಿಬಂತು. ಪುಣ್ಯಕೋಟಿ ಎಂಬ ಪ್ರಸಿದ್ಧ ನಾಟಕವನ್ನು ಮಕ್ಕಳು ಅಭಿನಯ ಮಾಡಿ, ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ನೈತಿಕ ಪಾಠವನ್ನೂ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ನಿಯಮ 377ರ ಅಡಿಯಲ್ಲಿ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕದ್ರವ್ಯ ಚಟುವಟಿಕೆಗಳ ಕುರಿತು ಲೋಕಸಭೆಯ ಗಮನಸೆಳೆದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ -ಕಹಳೆ ನ್ಯೂಸ್

ನಿಯಮ 377ರ ಪ್ರಕಾರ ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಸಂಸದರಿಗೆ ತಮ್ಮ ವಿಷಯಗಳನ್ನು ಸದನದ ಮುಂದಿಡುವ ಅವಕಾಶವಿದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕದ್ರವ್ಯ ವ್ಯಸನೆ ಮತ್ತು ಮಾರಾಟದ ಚಟುವಟಿಗೆಗಳ' ಕುರಿತು ಸದನದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. "ಪ್ರತಿ ತಿಂಗಳ ಮಾಧ್ಯಮಗಳ ಹೆಡ್‌ಲೈನ್‌ಗಳನ್ನು ಗಮನಸಿದರೆ ನಗರದಲ್ಲಿ ಡ್ರಗ್ಸ್‌ನ ಅತಿರೇಕದ ಚಟುವಟಿಕೆಗಳನ್ನು ಸ್ಪಷ್ಟವಾಗಿ ಗಮನಿಸಬಹುದು. ಮಂಗಳೂರು ನಗರವು ವಿವಿಧ...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಗ್ರಾಮೀಣ ಭಾಗಗಳಲ್ಲಿ ಬಿ.ಎಸ್.ಎನ್.ಎಲ್ ಸಂಪರ್ಕದ ಉನ್ನತೀಕರಣ ಹಾಗೂ ನೆಟ್ವರ್ಕ್ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ-ಕಹಳೆ ನ್ಯೂಸ್

ಈಗಲೂ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ಜನರು ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಗೆ ಅವಲಂಬಿತವಾಗಿದ್ದಾರೆ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಬಿ.ಎಸ್‌.ಎನ್‌.ಎಲ್ ನ ಜಿ.ಎಮ್ ನವೀನ್‌ ಕುಮಾರ್ ಗುಪ್ತ ಮತ್ತು ಎ.ಜಿ.ಎಮ್ ಶಂಕರ್ ದೇವಾಡಿಗ ಅವರ ಜೊತೆ 4G ಅಪ್‌ಗ್ರೇಡೇಶನ್‌ನ ಪ್ರಗತಿ ಹಾಗೂ ಗ್ರಾಮೀಣ ಭಾಗಗಳಲ್ಲಿರುವ ನೆಟ್ವರ್ಕ್ ಸಮಸ್ಯೆಯ ನಿವಾರಣೆಗೆ ಇರುವ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್...
1 15 16 17 18 19 41
Page 17 of 41