ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಸಾಂಸ್ಕ್ರತಿಕ ವೈಭವ:ಕಿರುತೆರೆ ನಟಿ ತನ್ವಿ ರಾವ್ (ಕೀರ್ತಿ) ಅವರಿಗೆ ಮಕ್ಕಿಮನೆ ಕಲಾವೃಂದದ ಗೌರವ ಪ್ರಶಸ್ತಿ ಪ್ರಧಾನ – ಕಹಳೆ ನ್ಯೂಸ್
ಮಂಗಳೂರು: - ಮಠದಕಣಿಯ ಶ್ರೀ ವೀರಭದ್ರ - ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 47ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಕಿರುತೆರೆ ನಟಿ, ಭರತನಾಟ್ಯ ಕಲಾವಿದೆ ತನ್ವಿ ರಾವ್ ರವರಿಗೆ ಮಕ್ಕಿಮನೆ ಕಲಾವೃಂದದ ಗೌರವ ಪ್ರಶಸ್ತಿ "ಕರುನಾಡ ಕಲಾ ಸಿರಿ" ಪ್ರಶಸ್ತಿ ಪ್ರಧಾನ ಮಾಡಲಾಯಿತು....