Tuesday, March 25, 2025

ಮಂಗಳೂರು

ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ರೆಸಾರ್ಟ್‌, ಹೋಮ್‌ಸ್ಟೇ ನೋಂದಣಿ ಕಡ್ಡಾಯ-ಮುಲ್ಲೈ ಮುಗಿಲನ್‌ -ಕಹಳೆ ನ್ಯೂಸ್

ಮಂಗಳೂರು: ರೆಸಾರ್ಟ್‌ ಮತ್ತು ಹೋಮ್‌ಸ್ಟೇಗಳನ್ನು ಕಡ್ಡಾಯವಾಗಿ ನೋಂದಣಿ ಮಾಡುವುದಲ್ಲದೇ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮತ್ತು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಸೂಚಿಸಿದ್ದಾರೆ. ಬುಧವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ರೆಸಾರ್ಟ್‌, ಹೋಮ್‌ ಸ್ಟೇ ಮಾಲಕರ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಲ್ಲಿ ನಡೆಸಲಾಗುತ್ತಿರುವ ರೆಸಾರ್ಟ್‌/ಹೋಮ್‌ ಸ್ಟೇಗಳಲ್ಲಿ ಬರುವ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಗೆ ಕೈಗೊಳ್ಳಬೇಕಾದ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಬಹುಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ ಪ್ರಕರಣ; ಇಂದು ಸಿಸಿಬಿ ತಂಡ ದಿಲ್ಲಿಗೆ-ಕಹಳೆ ನ್ಯೂಸ್

ಮಂಗಳೂರು: ಬಹುಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶ ಪ್ರಕರಣದ ತನಿಖೆಗೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ದಿಲ್ಲಿಗೆ ತೆರಳಲಿದ್ದಾರೆ. ಪೊಲೀಸರು ಬಂಧಿತ ಆರೋಪಿಗಳಾಗಿರುವ ಬಂಬಾ ಫಾಂಟಾ ಅಲಿಯಾಸ್‌ ಅಡೊನಿಸ್‌ ಜಬುಲೈಲ್‌ ಮತ್ತು ಒಲಿಜೊ ಇವನ್ಸ್‌ ಆಲಿಯಾಸ್‌ ಅಬಿಗೈಲ್‌ ಅಡೊನಿಸ್‌ಳನ್ನು ಅವರನ್ನು ಕೂಡ ಜತೆಗೆ ಕರೆದೊಯ್ಯಲಿದ್ದಾರೆ. ಆರೋಪಿಗಳು ದಿಲ್ಲಿಯಲ್ಲಿ ವಾಸವಿದ್ದ ಸ್ಥಳವನ್ನು ಪೊಲೀಸರು ದೃಢೀಕರಿಸಿಕೊಳ್ಳಲಿದ್ದಾರೆ. ಅವರು ಅಕ್ರಮವಾಗಿ ವಾಸವಾಗಿದ್ದರೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಿದ್ದಾರೆ. ಆರೋಪಿಗಳನ್ನು ದಿಲ್ಲಿ ವಿಮಾನ ನಿಲ್ದಾಣಕ್ಕೂ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

60ನೇ ಬೆಂಗ್ರೆ ವಾರ್ಡಿನ ತಣ್ಣೀರುಬಾವಿ ಬೆಂಗ್ರೆ ಮಹಾಜನ ಸಂಘದ ಬದಿಯಿಂದ ಸಮುದಾಯ ಭವನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ-ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ತಣ್ಣೀರುಬಾವಿ ಬೆಂಗ್ರೆ ಮಹಾಜನ ಸಂಘದ ಬದಿಯಿಂದ ಸಮುದಾಯ ಭವನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ್ ಕಾಮತ್ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಇಲ್ಲಿ ಆಗಬೇಕಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸ್ಥಳೀಯ ಪ್ರಮುಖರು ಗಮನಕ್ಕೆ ತಂದ ನಂತರ ಅಗತ್ಯ ಅನುದಾನವನ್ನು ಹೊಂದಿಸಿಕೊಂಡು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳುವ ಭರವಸೆ ಇದೆ ಎಂದರು. ರಮೇಶ್...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಆಟೋ ರಿಕ್ಷಾದಲ್ಲಿ 300 ಕೆಜಿಗೂ ಅಧಿಕ ಗೋಮಾಂಸ ಅಕ್ರಮ ಸಾಗಾಟ ಪತ್ತೆ-ಕಹಳೆ ನ್ಯೂಸ್

ಮಂಗಳೂರು: 300 ಕೆಜಿಗೂ ಅಧಿಕ ಅಕ್ರಮ ಗೋಮಾಂಸ ಸಾಗಾಟವನ್ನು ಭಜರಂಗದಳ ಕಾರ್ಯಕರ್ತರು ನಗರದ ಪಡೀಲ್ ಬಳಿ ಬುಧವಾರ (ಮಾ.19) ಪತ್ತೆ ಹಚ್ಚಿದ್ದಾರೆ. ಆಟೋರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ....
ಅಂಕಣದಕ್ಷಿಣ ಕನ್ನಡಬೆಂಗಳೂರುಮಂಗಳೂರುರಾಜ್ಯಸುದ್ದಿ

ಬಣ್ಣದ ಕುಂಚದಲ್ಲಿ ಶಬರಿ ಗಾಣಿಗ ಸಾಧನೆ ಚಿತ್ರ ; ಕ್ಯಾನ್ವಾಸ್ ಮೇಲೆ ನಿಮಿಷದಲ್ಲಿ ಶಬರಿ ಪೈಂಟಿಂಗ್ ಕಮಾಲ್..!! – ಕಹಳೆ ನ್ಯೂಸ್

ಆಕೆ ಕಣ್ಣು ಮುಚ್ಚಿ ಕಣ್ಣು ಬಿಡೋದ್ರೊಳಗಡೆ ಅದ್ಭುತ ಕಲಾಕೃತಿಯನ್ನ ಬಿಡಿಸೋ ಜಾಣೆ, ಹಾಡೋಕೆ ಶುರು ಮಾಡಿದರೆ ಕೋಗಿಲೆ ಸ್ವರದ ಇಂಪಾದ ಸಂಗೀತ. ಕ್ಯಾನ್ವಾಸ್ ಹಿಡಿದು ಕುಳಿತ್ರೆ ಕುತೂಹಲ ಕೆರಳಿಸುವ ಅದ್ಭುತವಾದ ಚಿತ್ರ. ಕರ್ನಾಟಕದ ಅತಿವೇಗದ ಚಿತ್ರಗಾರ್ತಿ ಎಂದೇ ಪ್ರಸಿದ್ಧಿ ಪಡೆದ ಈಕೆಯ ಹೆಸರು ಶಬರಿ ಗಾಣಿಗ. ಹೌದು..ಮೂರೇ ನಿಮಿಷದಲ್ಲಿ ಸುಂದರ ಚಿತ್ರ ಅರಳಿಸುವ ಚಾಕಚಕ್ಯತೆ ಇರುವ ಈಕೆ ಮೂಲತಃ ಮಂಗಳೂರಿನವರು. ಇಂಜಿನಿಯರ್ ಯೋಗೀಶ್ ಕುಮಾರ್ ಹಾಗೂ ಶಶಿಕಲಾ ದಂಪತಿ ಪುತ್ರಿ....
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು ಮಂಗಳಾದೇವಿ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವ-2025: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ- ಕಹಳೆ ನ್ಯೂಸ್

ಮಂಗಳೂರು: ಇತಿಹಾಸ ಪ್ರಸಿದ್ದ ಮಂಗಳೂರು ಮಹಾತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರ ಮಹೋತ್ಸವವು ಮಂಗಳಾವರ ಆರಂಭವಾಗಿದ್ದು (18-3-2025)ಮಲ್ಲಿಕಾ ಕಲಾವೃಂದ ಕದ್ರಿ ಮಂಗಳೂರು ಆಶ್ರಯದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು, ಎಲ್ಲರ ಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಮಲ್ಲಿಕಾ ಕಲಾವೃಂದ ಕಾರ್ಯಧ್ಯಕ್ಷರಾದ ಸುಧಾಕರ ರಾವ್ ಪೇಜಾವರ, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಹಾಗೂ ದ.ಕ ಜಿಲ್ಲಾ ಅಧ್ಯಕ್ಷರಾದ ಸುದೇಶ್...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ನೇತ್ರಾವತಿ ನದಿ ಬಳಿ ಕಂದಕಕ್ಕೆ ಉರುಳಿಬಿದ್ದ ಕಾರು-ಕಹಳೆ ನ್ಯೂಸ್

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು-ಕಲ್ಲಾಪು ಬಳಿಯ ನೇತ್ರಾವತಿ ನದಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 15 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಘಟನೆ ಮಾ.17ರ ಸೋಮವಾರ ನಡೆದಿದೆ. ಐವರು ಯುವಕರಿದ್ದ ಕಾರು 15 ಫೀಟ್‌ ಆಳಕ್ಕೆ ಉರುಳಿ ಬಿದ್ದ ಘಟನೆ ತೊಕ್ಕೊಟ್ಟು ಸಮೀಪದ ರಾ.ಹೆ. ಕಲ್ಲಾಪು ಸಮೀಪ ಸಂಭವಿಸಿದೆ. ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಐವರು ಯುವಕರು ಸಣ್ಣಪುಟ್ಟ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ವಾಜಪೇಯಿಯವರು ಜೀವಿತಾವಧಿಯಲ್ಲಿ ಭೇಟಿ ಮಾಡಿದ್ದ ಬಿಜೆಪಿಯ ಹಿರಿಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು:ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ವಾಜಪೇಯಿಯವರು ಜೀವಿತಾವಧಿಯಲ್ಲಿ ಭೇಟಿ ಮಾಡಿದ್ದ ಬಿಜೆಪಿಯ ಹಿರಿಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನವಾಯತ್ ಬಂದರು ವಾರ್ಡಿನ ದಿ. ವೆಂಕಟೇಶ ಕಾಮತ್ ರವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಗೌರವಿಸಲಾಯಿತು. ನಂತರ ಮಾತನಾಡಿದ ಶಾಸಕರು, ಜನಸಂಘದ ಕಾಲದಿಂದಲೂ ಇವರ ಕುಟುಂಬ...
1 2 3 4 67
Page 2 of 67
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ