ಪ್ರವಾಸೋದ್ಯಮ ಸಂಸ್ಕೃತಿಯ ಆಗರ: ನಾಗೇಶ್ ಶೆಟ್ಟಿ-ಕಹಳೆ ನ್ಯೂಸ್
ಮಂಗಳೂರು: ಭಾರತೀಯ ಪ್ರವಾಸೋದ್ಯಮ ಅತ್ಯಂತ ಸುರಕ್ಷಿತವಾಗಿದ್ದು, ದೇಶದ ಜಿಡಿಪಿ ಕ್ಷೇತ್ರಕ್ಕೆ ಶೇ. ಹತ್ತರಷ್ಟು ಕೊಡುಗೆ ನೀಡುತ್ತಿದೆ. ಅಲ್ಲದೇ, ದೇಶದ ಸಂಸ್ಕೃತಿಯನ್ನು ಪಸರಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತದೆ ಎಂದು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸಪ್ರೆಸ್ನ ನಿವೃತ್ತ ಸ್ಟೇಷನ್ ಮಾಸ್ಟರ್ನಾ ಗೇಶ್ ಶೆಟ್ಟಿ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಬಿಬಿಎ ಮತ್ತು ಬಿಎ ಪ್ರವಾಸೋದ್ಯಮ ವಿಭಾಗದ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರವಾಸೋದ್ಯಮ ಮತ್ತು ಶಾಂತಿ ವಿಷಯದ...