ಕೂಳೂರು ಹಳೆ ಸೇತುವೆಯಲ್ಲಿ ಬಿರುಕು – ಸಂಚಾರ ಬಂದ್!!-ಕಹಳೆ ನ್ಯೂಸ್
ಮಂಗಳೂರು: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಹಾಗೂ ಹಳೆಯ ಸೇತುವೆ ಕೂಳೂರು ಹಳೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ದುರಸ್ತಿ ಕಾಮಗಾರಿ ಪ್ರಾರಂಭವಾಗಿದೆ. ಕೆಲ ದಿನಗಳವರೆಗೆ ನಿಗದಿತ ಸಮಯದಲ್ಲಿ ಮಾತ್ರ ಸಂಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಸದ್ಯ ಕಾಮಗಾರಿ ಪ್ರಾರಂಭವಾಗಿದ್ದು, ಸಂಚಾರ ಬಂದ್ ಮಾಡಲಾಗಿದೆ. ಇಂದು ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಆಗಿರುವ ದೃಶ್ಯ ಕಂಡುಬಂದಿದೆ. ವಾಹನ ಸಂಚಾರಕ್ಕೆ ಒಂದು ಕಡೆಯ ಸೇತುವೆ ಮೇಲೆ ಅವಕಾಶ ನೀಡಿದ್ದು,...