ನಟನೆ, ನಿರೂಪಣೆ ಎಲ್ಲದಕ್ಕೂ ಸೈ ಪ್ಯಾಕು ಪ್ಯಾಕು…!! ಹಿತೇಶ್ ಕಾಪಿನಡ್ಕ ಎಂಬ ಸಕಲಕಲಾ ವಲ್ಲಭ..!! – ಕಹಳೆ ನ್ಯೂಸ್
ಅಕ್ಕಾ ಮೀನ್ ಬೋಡೆ.. ಪ್ಯಾಕು ಪ್ಯಾಕು ಪ್ಯಾಕು ಈ ಡೈಲಾಗ್ ಕೇಳಿದ್ರೇನೆ ತಕ್ಷಣ ನೆನಪಾಗೋದೆ ಪ್ಯಾಕು ಪ್ಯಾಕು ಹಿತೇಶ್ ಕಾಪಿನಡ್ಕ ಅವರ ನಟನೆ. ಹೌದು ಝೀ ಕನ್ನಡ ಕಾಮಿಡಿ ಕಿಲಾಡಿ ಮೂಲಕ ಜನ ಮನೆ ಸೆಳೆದ ಹಿತೇಶ್ ಎರಡನೇ ರನ್ನರ್ ಅಪ್ ಆಗಿ ಈಗ ಕರ್ನಾಟಕಕ್ಕೆ ಚಿರಪರಿಚತ ವ್ಯಕ್ತಿ. ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಲೇಡಿ ಗೆಟಪ್ ಹಾಕಿ ನುಲಿಯುತ್ತಾ ನಮ್ಮನ್ನೆಲ್ಲಾ ತಮ್ಮ ಹಾಸ್ಯ ಮೂಲಕನೇ ನಗೆಗಡಲಲ್ಲಿ ತೇಲಿಸುತ್ತಿದ್ದ ಹಿತೇಶ್...