ಮಂಗಳೂರು: ಶಾಲಾ ಕಾಂಪೌಂಡ್ ಗೋಡೆ ಕುಸಿದು ವಿದ್ಯಾರ್ಥಿನಿ ಸಾವು – ಕಹಳೆ ನ್ಯೂಸ್
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನ್ಯೂಪಡ್ಪುನಲ್ಲಿ ಈ ಘಟನೆ ನಡೆದಿದ್ದು, ಹರೇಕಳ ಹಾಜಬ್ಬ ಅವರು ನಿರ್ಮಿಸಿದ್ದ ಶಾಲೆಯ ಕಾಪೌಂಡ್ ಗೋಡೆ ಕುಸಿದು 7 ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಮೃತ ವಿದ್ಯಾರ್ಥಿನಿಯನ್ನು ನ್ಯೂಪಡ್ಪು ನಿವಾಸಿ ಸಿದ್ದೀಖ್ ಜಮೀಲಾ ಪುತ್ರಿ ಶಾಜಿಯಾ (7) ಎಂದು ಗುರುತಿಸಲಾಗಿದೆ. ಹಾಜಬ್ಬರ ಶಾಲೆಯಲ್ಲಿ ವಿದ್ಯಾರ್ಥಿನಿ ಶಾಜಿಯಾ 3ನೇ ತರಗತಿ ಓದುತ್ತಿದ್ದಳು. ಶಾಲೆಯಲ್ಲಿ ನಡೆಯುತ್ತಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿ ಗೇಟಿನ ಬಳಿ ಆಟವಾಡುತ್ತಿದ್ದಾಗ...