ನಾಗುರಿಯ ಔಷಧ ಮಳಿಗೆಯ ಮಹಿಳಾ ಉದ್ಯೋಗಿಗೆ ಚೂರಿಯಿಂದ ಹಲ್ಲೆ ಗೈದ ಆರೋಪಿಯನ್ನು ಬಂಧಿಸಿದ ಪೊಲೀಸರು-ಕಹಳೆ ನ್ಯೂಸ್
ಮಂಗಳೂರು: ನಗರದ ನಾಗುರಿಯ ಔಷಧ ಮಳಿಗೆಯ ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ, ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 17,500 ನಗದು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೊAದೇಲ್ ಚರ್ಚ್ ಹಿಂಭಾಗದ ಪಟ್ರಕೋಡಿಯ ಸಿರಿಲ್ ಕಂಪೌAಡ್ ನಿವಾಸಿ ಸುನೀಲ್ (31 ವರ್ಷ) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 'ಆರೋಪಿಯು 2024ರ ಡಿ 28ರಂದು...