ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ವಿಭಿನ್ನ ಪ್ರಚಾರ ಒಂಬತ್ತು ದಿನ ನಾರಿಶಕ್ತಿ ಬೂತ್ ಅಭಿಯಾನ : ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳಾ ರಾವ್ – ಕಹಳೆ ನ್ಯೂಸ್
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಲು ಗುರುವಾರದಿಂದ (ಏ.18ರಿಂದ) ಚುನಾವಣಾ ದಿನ ಸೇರಿ ಒಂಬತ್ತು ದಿನಗಳಿದ್ದು ಈ ಒಂಬತ್ತು ದಿನಗಳಲ್ಲಿ ಬಿಜೆಪಿ ಮಹಿಳಾ ಘಟಕ ವಿಭಿನ್ನವಾಗಿ ಪ್ರಚಾರ ಕೈಗೊಳ್ಳಲಿದೆ. ಏ.26ರಂದು ಮತದಾನ ನಡೆಯುವ ಎಲ್ಲ ಬೂತ್‌ಗಳಲ್ಲಿ ಮಹಿಳಾ ಮತದಾರರೇ ಮೊದಲು ಮತ ಚಲಾಯಿಸುವಂತೆ ಮಾಡಲು ಮನೆಮನೆಗೆ ತೆರಳಿ ಪ್ರಚಾರ ಕೈಗೊಳ್ಳಲಿದ್ದಾರೆ. ಚೈತ್ರ ಮಾಸದ ಮೊದಲ ದಿನದ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು, ನಾರಿ...