ನೆಲ್ಲಿದಡಿಗುತ್ತು ದೈವಾರಾಧನೆಗೆ ಅಡ್ಡಿಪಡಿಸಿದ್ದು ಯಾರು:ಡಿಸಿ ಪ್ರಶ್ನೆ-ಕಹಳೆ ನ್ಯೂಸ್
ಮಂಗಳೂರು: ಎಂಎಸ್‌ಇಜೆಡ್ ವ್ಯಾಪ್ತಿಯ ನೆಲ್ಲಿದಡಿ ಗುತ್ತಿನ ಕಾಂತೇರಿ ಜುಮಾದಿ ದೈವಾರಾಧನೆಗೆ ಸಂಬಂಧಿಸಿದ ಆಚರಣೆ ಮುಂದುವರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ ಹಾಗೂ ಎಂಎಸ್‌ಇಜೆಡ್ ಅಧಿಕಾರಿಗಳು ಸ್ಪಷ್ಟಪಡಿಸಿದರು. ನೆಲ್ಲಿದಡಿ ಗುತ್ತಿನ ಕಾಂತೇರಿ ಜುಮಾದಿ ದೈವಾರಾಧನೆಗೆ ಅಡ್ಡಿಪಡಿಸಲಾಗುತ್ತದೆ ಎಂಬ ಆರೋಪ ಕೇಳಿಬಂದಿದ್ದರಿಂದ, ಈ ವಿಚಾರ ಇತ್ಯರ್ಥ ಪಡಿಸಲು ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, 'ಆಚರಣೆಗೆ ಈ ಜನವರಿ...